ಕರ್ನಾಟಕ

karnataka

ETV Bharat / international

ಆಫ್ಘನ್​ ಸೇನೆ ದಾಳಿ: 25 ತಾಲಿಬಾನ್ ಉಗ್ರರ ಹತ್ಯೆ..! - ಅಫಘಾನ್ ಸೇನೆ ದಾಳಿ

ಅಪಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ, ಇಬ್ಬರು ಕಮಾಂಡರ್‌ಗಳು ಹಾಗೂ 25 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನೆಯು ಮಾಹಿತಿ ನೀಡಿದೆ.

25 Taliban militants killed in raid: Afghan Army
25 ತಾಲಿಬಾನ್ ಉಗ್ರರ ಹತ್ಯೆ

By

Published : Dec 5, 2020, 7:18 PM IST

ಕಾಬೂಲ್: ಅಪಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳು, ಹೆಲ್ಮಂಡ್‌ನ ನಾವೇ-ಇ-ಬರಾಕ್‌ಜೈನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ದಾಳಿಯಲ್ಲಿ ಇಬ್ಬರು ಕಮಾಂಡರ್‌ಗಳು ಸೇರಿದಂತೆ ಸುಮಾರು 25 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. ಹಾಗೂ 8 ಮಂದಿ ಗಾಯಗೊಂಡಿರುವುದಾಗಿ ಸೇನೆಯು ಮಾಹಿತಿ ನೀಡಿದೆ.

ಓದಿ:ಪುಲ್ವಾಮ ಮಾದರಿಯಲ್ಲಿ ಸೈನಿಕರ ಮೇಲೆ ದಾಳಿ... 31 ಸಾವು, 24 ಜನರಿಗೆ ಗಾಯ!

ಭದ್ರತಾ ಪಡೆಗಳ ನೆಲೆಗಳ ಮೇಲೆ ಉಗ್ರರು ದಾಳಿ ನಡೆಸಲು ಯತ್ನಿಸುತ್ತಿದ್ದ ಕಾರಣ, ಈ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಉಗ್ರರ ಆರು ಅಡಗು ತಾಣಗಳ ಮೇಲೆ ದಾಳಿ ನಡೆಸಲಾಗಿದೆ.

ಕೆಲ ದಿನಗಳ ಹಿಂದೆ ಅಪಘಾನಿಸ್ತಾನದಲ್ಲಿ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಪುಲ್ವಾಮಾ ಮಾದರಿಯಲ್ಲಿ ಆತ್ಮಾಹುತಿ ಕಾರು ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 31 ಜನ ಮೃತಪಟ್ಟಿದ್ದರು.

ABOUT THE AUTHOR

...view details