ಒಸಾಕಾ (ಜಪಾನ್) :ಮಾನಸಿಕ ರೋಗಿಗಳ ಚಿಕಿತ್ಸಾಲಯವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ 24 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಜಪಾನ್ನ ಒಸಾಕಾದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಒಸಾಕಾದಲ್ಲಿರುವ ಕಟ್ಟಡವೊಂದರ 4ನೇ ಮಹಡಿಯಲ್ಲಿರುವ ಕ್ಲಿನಿಕ್ನಲ್ಲಿ ಬೆಂಕಿ ಕಾಣಿಸಿದ್ದು, ಅಲ್ಲಿ ಬೆಂಕಿ ನಂದಿಸುವ ಅಗ್ನಿಶಾಮಸ ಸಾಧನ ಇರಲಿಲ್ಲ ಎಂದು ಹೇಳಲಾಗಿದೆ. ಘಟನೆಯಲ್ಲಿ ಇನ್ನೂ 28 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಶಾಪಿಂಗ್ ಮಾಲ್ನಲ್ಲಿ ಅಗ್ನಿ ಅವಘಡ.. ಭಯದಿಂದಲೇ ಪ್ರಾಣಬಿಟ್ಟ 27 ಜನ!