ಇಸ್ಲಾಮಾಬಾದ್: ಜಿಲ್ಲೆಯ ಬಲೂಚ್ ಪ್ರದೇಶದಿಂದ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿಗೆ ಪ್ರಯಾಣಿಕರು ಬಸ್ನಲ್ಲಿ ಹೋಗುತ್ತಿದ್ದಾಗ ಸುಧನೋತಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ತಾಂತ್ರಿಕ ದೋಷದಿಂದಾಗಿ 500 ಮೀಟರ್ ಆಳದ ಕಂದಕಕ್ಕೆ ಬಸ್ವೊಂದು ಉರುಳಿ ಬಿದ್ದಿದ್ದು, ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 23 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂದಕಕ್ಕೆ ಉರುಳಿ ಬಿದ್ದ ಬಸ್, 23 ಜನ ಸಾವು... ಮಸೀದಿಯ ಮೈಕ್ಗಳ ಮೂಲಕ ಜನರನ್ನ ಎಚ್ಚರಿಸಿದ ಮೌಲಾನಾ - ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ಅಪಘಾತ ಸುದ್ದಿ
ಬುಧವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಕಂದಕಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಮೀಪದ ರಸ್ತೆ ಬದಿ ವ್ಯಾಪಾರಿಯೊಬ್ಬರು ಅಪಘಾತವನ್ನು ನೋಡಿ ಸ್ಥಳೀಯ ಗ್ರಾಮದ ಮಸೀದಿಯ ಮೌಲಾನಾಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಮಸೀದಿಯ ಮೌಲಾನಾ ಅಪಘಾತ ಸುದ್ದಿಯನ್ನು ಧ್ವನಿವರ್ಧಕದ ಮೂಲಕ ಇಡೀ ಗ್ರಾಮಕ್ಕೆ ತಿಳಿಸಿದರು. ಈ ಸುದ್ದಿ ತಿಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣ ಕಾರ್ಯ ಕೈಗೊಂಡರು.
ಪಿಒಕೆಯಲ್ಲಿ ಸರಿಯಾದ ರಸ್ತೆಗಳಿಲ್ಲದ ಪರ್ವತ ಪ್ರದೇಶವಾಗಿದೆ. ಚಾಲಕರ ಅಜಾಗರೂಕತೆ ಮತ್ತು ದೋಷಯುಕ್ತ ವಾಹನಗಳು ಕಾರಣಗಳಿಂದ ಆಗಾಗ್ಗೆ ಇಂತಹ ಅಪಘಾತಗಳು ಸಂಭವಿಸುತ್ತವೆ. ಕಳೆದ ತಿಂಗಳು ಪಿಒಕೆಯ ಪೂಂಚ್ ಮತ್ತು ನೀಲಂ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ರಸ್ತೆ ಅಪಘಾತಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಮತ್ತು ಅನೇಕ ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು 32 ಮಂದಿ ಗಾಯಗೊಂಡಿದ್ದರು.