ಕರ್ನಾಟಕ

karnataka

ETV Bharat / international

ಹೌತಿ ಬಂಡುಕೋರರ ದಾಳಿ : 20 ಮಂದಿ ಯೆಮನ್‌ ಸೈನಿಕರು ಸಾವು

ಸೌದಿ ಬೆಂಬಲಿತ ಯೆಮನ್ ಸೇನೆಯ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಒಟ್ಟು 20 ಯೋಧರನ್ನು ಹತ್ಯೆ ಮಾಡಿರುವ ಘಟನೆ ಮಾರಿಬ್​ನಲ್ಲಿ ನಡೆದಿದೆ..

By

Published : Feb 8, 2021, 4:07 PM IST

Yemen's Houthis
Yemen's Houthis

ಯೆಮನ್/ಸನಾ: ಹೌತಿ ಬಂಡುಕೋರರು ಯೆಮನ್‌ ಸೇನೆಯ ಮೇಲೆ ತೈಲ ಸಂಪದ್ಭರಿತವಾದ ಮಾರಿಬ್‌ ಪ್ರಾಂತ್ಯದಲ್ಲಿ ಸಶಸ್ತ್ರ ದಾಳಿ ನಡೆಸಿದ್ದು, ಮಿಲಿಟರಿ ಕಾರ್ಯಾಚರಣೆ ವೇಳೆ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈಶಾನ್ಯ ಪ್ರಾಂತ್ಯದಲ್ಲಿ ಸರ್ಕಾರಿ ಪಡೆಗಳು ಕಾರ್ಯ ನಿರ್ವಹಿಸುತ್ತಿರುವ ಮಿಲಿಟರಿ ಪ್ರದೇಶಗಳ ಮೇಲೆ ಹೌತಿ ಬಂಡುಕೋರರು ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ದಾಳಿಯಲ್ಲಿ 17 ಸರ್ಕಾರಿ ಸೈನಿಕರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಾರಿಬ್‌ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ದಾಳಿ ವೇಳೆ 7 ಹೌತಿ ಬಂಡುಕೋರರನ್ನು ಸರ್ಕಾರಿ ಪಡೆಗಳು ಸೆರೆಹಿಡಿದಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನು ನಿನ್ನೆ ಮಾರಿಬ್‌ನ 3 ನೇ ಪ್ರಾದೇಶಿಕ ಮಿಲಿಟರಿ ಕಮಾಂಡ್‌ನ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಮೂರು ಜನರು ಸಾವನ್ನಪ್ಪಿದರು. ಹಲವಾರು ಮಂದಿ ಗಾಯಗೊಂಡರು.

ಮತ್ತೊಂದೆಡೆ, ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟವು ಮಾರಿಬ್ ಜಿಲ್ಲೆಯ ಸೆರ್ವಾ ವಿರುದ್ಧ ನಾಲ್ಕು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ಮಾಸಿರಾ ಟಿವಿ ವರದಿ ಮಾಡಿದೆ.

ABOUT THE AUTHOR

...view details