ಅಂಕಾರಾ :ಟರ್ಕಿಯ ಕಪ್ಪು ಸಮುದ್ರದ ಬಾರ್ಟಿನ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗು ಮುಳುಗಿ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿಯನ್ನು ರಕ್ಷಿಸಲಾಗಿದೆ.
ಅರ್ವಿನ್ ಎಂಬ ಹೆಸರಿನ ಹಡಗು ಇದಾಗಿದ್ದು, ಜಾರ್ಜಿಯಾದಿಂದ ಬಲ್ಗೇರಿಯಾ ಕಡಗೆ ಹೋಗುತ್ತಿತ್ತು. ಹಡಗಿನಲ್ಲಿ 12 ಮಂದಿ ಸಿಬ್ಬಂದಿಯಿದ್ದರು ಎಂದು ಟರ್ಕಿಯ ಕರಾವಳಿ ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.