ಕಠ್ಮಂಡು: ಕಳೆದೊಂದು ತಿಂಗಳಿನಿಂದ ಸಂಭವಿಸುತ್ತಿರುವ ಭೀಕರ ಭೂಕುಸಿತಕ್ಕೆ ನೇಪಾಳ ತತ್ತರಿಸಿದ್ದು, ಈವರೆಗೆ ನೂರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.
ಭೂಕುಸಿತಕ್ಕೆ ನೇಪಾಳದಲ್ಲಿ ಮತ್ತೆ 18 ಮಂದಿ ಬಲಿ - ಸಿಂಧುಪಾಲ್ಚೌಕ್ ಜಿಲ್ಲೆ
ಆಗಸ್ಟ್ 14 ರಂದು ನೇಪಾಳದ ಸಿಂಧುಪಾಲ್ಚೌಕ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಸಂಬಂಧ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ನೇಪಾಳ ಭೂಕುಸಿತ
ಆಗಸ್ಟ್ 14 ರಂದು ನೇಪಾಳದ ಸಿಂಧುಪಾಲ್ಚೌಕ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿತ್ತು. ನಿನ್ನೆ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮಣ್ಣಿನಲ್ಲಿ ಇನ್ನೂ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ನೇಪಾಳದ ಬಹುತೇಕ ಭಾಗವು ಗುಡ್ಡಪ್ರದೇಶಗಳಿಂದ ಕೂಡಿರುವುದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಭೂಕುಸಿತ ಉಂಟಾಗುತ್ತಿರುತ್ತದೆ.