ಬ್ಯಾಂಕಾಕ್: ಯೋಧನೊಬ್ಬ ನಡೆಸಿರುವ ಸಾಮೂಹಿಕ ಗುಂಡಿನ ದಾಳಿಯಲ್ಲಿ 17 ಜನರು ಸಾವನ್ನಪ್ಪಿರುವ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ.
ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ಮಳೆಗರೆದು 17 ಮಂದಿಯ ಪ್ರಾಣ ತೆಗೆದ ಯೋಧ! - ಸಾಮೂಹಿಕ ಗುಂಡಿನ ದಾಳಿಯಲ್ಲಿ 17 ಜನರ ಸಾವು
ಥಾಯ್ಲೆಂಡ್ನ ಕೊರತ್‌ನಲ್ಲಿ ನಡೆದಿರುವ ಸಾಮೂಹಿಕ ಗುಂಡಿನ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ.
ಸಾಮೂಹಿಕ ಗುಂಡಿನ ದಾಳಿ
ಥಾಯ್ಲೆಂಡ್ನ ಈಶಾನ್ಯ ನಗರ ಕೊರತ್‌ನ ಶಾಪಿಂಗ್ ಮಾಲ್‌ನಲ್ಲಿ ನಡೆದಿರುವ ಈ ಘಟನೆಯಲ್ಲಿ ಯೋಧನೊಬ್ಬ ಸೇರಿ 17 ಮಂದಿ ಮೃತಪಟ್ಟಿದ್ದು, 14 ಜನರಿಗೆ ಗಾಯಗಳಾಗಿರುವುದಾಗಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರ್ಜೆಂಟ್-ಮೇಜರ್ ಜಕ್ರಪಂತ್ ಥೊಮ್ಮ ಎಂಬ ಯೋಧ ಕೃತ್ಯ ಎಸಗಿದ್ದಲೇ, ಇದನ್ನು ಆತ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ತನ್ನ ಫೋಟೋಗಳನ್ನು ಪೋಸ್ಟ್ ಮಾಡಿ, 'ನಾನು ಶರಣಾಗಬೇಕೇ? ಯಾರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾನೆ.
Last Updated : Feb 8, 2020, 8:41 PM IST