ಕರ್ನಾಟಕ

karnataka

ETV Bharat / international

ಹೊಸ ವರ್ಷದ ಸಂಭ್ರಮದ ನಡುವೆ ಪ್ರವಾಹಕ್ಕೆ ನಲುಗಿದ ಇಂಡೋನೇಷ್ಯಾ, 16 ಸಾವು! - flood in Indonesia

ಹೊಸ ವರ್ಷದ ಸಂಭ್ರಮದ ನಡುವೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತ, ಭಾರಿ ಪ್ರವಾಹಕ್ಕೆ ತುತ್ತಾಗಿದೆ. ಪ್ರವಾಹದಲ್ಲಿ ಸಿಲುಕಿ ಕನಿಷ್ಠ 16 ಜನ ಸಾವನ್ನಪ್ಪಿದ್ದಾರೆಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಇಂಡೋನೇಷ್ಯಾ ಪ್ರವಾಹ, flooding in Indonesia's capital
ಇಂಡೋನೇಷ್ಯಾ ಪ್ರವಾಹ

By

Published : Jan 2, 2020, 4:41 PM IST

ಜಕಾರ್ತ:ಒಂದೆಡೆ ಇಂಡೋನೇಷ್ಯಾ ಹೊಸ ವರ್ಷದ ಸಂಭ್ರಮದಲ್ಲಿದ್ರೆ, ಮತ್ತೊಂದೆಡೆ ರಾಜಧಾನಿ ಜಕಾರ್ತ ಭಾರಿ ಪ್ರವಾಹಕ್ಕೆ ತುತ್ತಾಗಿದೆ. ಪ್ರವಾಹದಲ್ಲಿ ಸಿಲುಕಿ ಕನಿಷ್ಠ 16 ಜನ ಮೃತಪಟ್ಟಿದ್ದಾರೆ.

ಪ್ರವಾಹದ ಅಬ್ಬರದಿಂದ ಹಲವರು ಸೂರು ಕಳೆದುಕೊಂಡು ಬೀದಿಗೆ ಬಂದಿದ್ದು, ಹಲವು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಇಂಡೋನೇಷ್ಯಾ ಪ್ರವಾಹ

ಇನ್ನೊಂದೆಡೆ ವಿಪತ್ತು ನಿರ್ವಹಣಾ ಸಂಸ್ಥೆಯು ಪ್ರವಾಹದ ಅಬ್ಬರದ ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಕಾರುಗಳು ಹಾಗೂ ಮನೆಗಳು ಮಣ್ಣು ಮಿಶ್ರಿತ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ. ಇನ್ನೊಂದೆಡೆ ರಕ್ಷಣಾ ಕಾರ್ಯವೂ ನಡೆಯುತ್ತಿದ್ದು, ರಕ್ಷಣಾ ಸಿಬ್ಬಂದಿ ಮಕ್ಕಳು ಹಾಗೂ ವಯಸ್ಕರನ್ನು ರಬ್ಬರ್​ ಬೋಟ್​ಗಳ ಸಹಾಯದಿಂದ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುತ್ತಿದ್ದಾರೆ.

ಸಾವಿರಾರು ಮನೆಗಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದು, ಸುಮಾರು 31,000ಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡು ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಜಕಾರ್ತ ಹಾಗೂ ಪಶ್ಚಿಮ ಜಾವಾದ ಹಲವು ಸ್ಥಳಗಳಲ್ಲಿ 37 ಸೆಂಟಿ ಮೀಟರ್​ನಷ್ಟು ಮಳೆಯಾಗಿದ್ದು, ಸಿಲಿವುಂಗ್ ಮತ್ತು ಸಿಸಾಡೇನ್ ನದಿಗಳು ಉಕ್ಕಿ ಹರಿಯುತ್ತಿವೆ.

ABOUT THE AUTHOR

...view details