ಕರ್ನಾಟಕ

karnataka

ETV Bharat / international

ತಾಲೂಖಾನ್ ಆಕ್ರಮಿಸಲು ಯತ್ನ, ಆಫ್ಘನ್ ಭದ್ರತಾ ಪಡೆಗಳಿಂದ 15 ತಾಲಿಬಾನಿಗಳ ಹತ್ಯೆ - ಶವಗಳನ್ನು ಬಿಟ್ಟು ಓಡಿಹೋದ ತಾಲಿಬಾನ್ ಉಗ್ರರು

ಕಳೆದ ಒಂದು ತಿಂಗಳಿನಿಂದ ತಖಾರ್ ಪ್ರಾಂತ್ಯದಲ್ಲಿ ಕನಿಷ್ಠ ನಾಲ್ಕು ಜಿಲ್ಲೆಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಈಗ ತಾಲೂಖಾನ್ ನಗರವನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದು, ಈ ಪ್ರಯತ್ನದಲ್ಲಿ ವಿಫಲವಾಗಿದೆ..

ತಾಲೂಖಾನ್ ಆಕ್ರಮಿಸಲು ಯತ್ನಿಸಿದ ತಾಲಿಬಾನಿಗಳು, ಆಫ್ಘನ್ ಭದ್ರತಾ ಪಡೆಗಳಿಂದ 15 ಮಂದಿ ಹತ್ಯೆ
ತಾಲೂಖಾನ್ ಆಕ್ರಮಿಸಲು ಯತ್ನಿಸಿದ ತಾಲಿಬಾನಿಗಳು, ಆಫ್ಘನ್ ಭದ್ರತಾ ಪಡೆಗಳಿಂದ 15 ಮಂದಿ ಹತ್ಯೆ

By

Published : Jul 7, 2021, 7:14 PM IST

ತಾಲೂಖಾನ್(ಆಫ್ಘಾನಿಸ್ತಾನ): ತಾಲಿಬಾನ್ ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸಿ 15 ಉಗ್ರರನ್ನು ಆಫ್ಘಾನಿಸ್ತಾನದ ಭದ್ರತಾ ಪಡೆ ಕೊಂದಿದೆ. ಶವಗಳನ್ನು ಬಿಟ್ಟು ಉಗ್ರರು ಓಡಿಹೋಗಿದ್ದಾರೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟನೆ ನೀಡಿದೆ.

ತಾಲಿಬಾನ್ ದಂಗೆಕೋರರು ಬುಧವಾರ ಬೆಳಗ್ಗೆ ತಾಲೂಖಾನ್ ನಗರದ ಮೇಲೆ ಭಾರಿ ದಾಳಿ ನಡೆಸಲು ಯತ್ನಿಸಿ, ವಿಫಲರಾದರು. ಈ ವೇಳೆ ಭದ್ರತಾ ಪಡೆಗಳು ದಾಳಿ ನಡೆಸಿದ್ದು, 15 ಮಂದಿ ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಒಂದೆರೆಡು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಸುಮಾರು 20 ಮಂದಿ ಭಯೋತ್ಪಾದಕರು ಗಾಯಗೊಂಡಿದ್ದಾರೆ. ಓರ್ವ ಭದ್ರತಾ ಪಡೆಯ ಯೋಧ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ರಾಜ್ಯಸಭೆ TO ಮೋದಿ ಸಂಪುಟ: ಉದ್ಯಮಿ ರಾಜೀವ್ ಚಂದ್ರಶೇಖರ್ ಕನಸೀಗ ನನಸು

ಕಳೆದ ಒಂದು ತಿಂಗಳಿನಿಂದ ತಖಾರ್ ಪ್ರಾಂತ್ಯದಲ್ಲಿ ಕನಿಷ್ಠ ನಾಲ್ಕು ಜಿಲ್ಲೆಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಈಗ ತಾಲೂಖಾನ್ ನಗರವನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದು, ಈ ಪ್ರಯತ್ನದಲ್ಲಿ ವಿಫಲವಾಗಿದೆ.

ABOUT THE AUTHOR

...view details