ಕರ್ನಾಟಕ

karnataka

ETV Bharat / international

15 ಮಂದಿ ತಾಲಿಬಾನ್ ಉಗ್ರರನ್ನು ಕೊಂದ ಆಫ್ಘನ್ ಭದ್ರತಾ ಪಡೆ - ಅಫ್ಘಾನಿಸ್ತಾನದಲ್ಲಿ ಅಪರಾಧ ಸುದ್ದಿ

ಆಫ್ಘನ್ ನ್ಯಾಷನಲ್ ಸೆಕ್ಯೂರಿಟಿ ಫೋರ್ಸ್ ತಾಲಿಬಾನ್ ಉಗ್ರರ ಮೇಲೆ ದಾಳಿ ನಡೆಸಿದ್ದು, ಸುಮಾರು 15 ಭಯೋತ್ಪಾದಕರನ್ನು ಕೊಂದಿದೆ.

Taliban terrorists killed in
ತಾಲಿಬಾನ್ ಉಗ್ರರನ್ನು ಕೊಂದ ಆಫ್ಘನ್ ಭದ್ರತಾ ಪಡೆ

By

Published : Dec 7, 2020, 3:12 PM IST

ಕಾಬೂಲ್ (ಅಫ್ಘಾನಿಸ್ತಾನ):ಭಯೋತ್ಪಾದಕರ ಮೇಲೆ ಆಫ್ಘನ್ ನ್ಯಾಷನಲ್ ಸೆಕ್ಯೂರಿಟಿ ಫೋರ್ಸ್ ದಾಳಿ (ಎಎನ್​ಎಸ್​ಎಫ್​​) ಮಾಡಿ 15 ಮಂದಿಯನ್ನು ಕೊಂದಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಆಫ್ಘನ್ ಭದ್ರತಾ ಪಡೆ ದಾಳಿ ನಡೆಸಿದ್ದು, ಐದು ಮಂದಿಗೆ ಗಾಯವಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ:ಆಫ್ಘನ್​ ಸೇನೆ ದಾಳಿ: 25 ತಾಲಿಬಾನ್ ಉಗ್ರರ ಹತ್ಯೆ..!

ಇದರ ಜೊತೆಗೆ ತಾಲಿಬಾನ್ ಸಂಘಟನೆ ಬಳಿಯಿಂದ ವಶಪಡಿಸಿಕೊಂಡ ಶಸ್ತ್ರಗಳು ಹಾಗೂ ಮದ್ದು ಗುಂಡುಗಳನ್ನು ನಾಶ ಮಾಡಲಾಗಿದೆ.

ಡಿಸೆಂಬರ್ 5ರಂದು ಹೆಲ್ಮಾಂಡ್ ಪ್ರಾಂತ್ಯದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಮಾಂಡರ್‌ಗಳು ಹಾಗೂ 25 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದರು. ಈಗಲೂ ಕೂಡ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ.

ABOUT THE AUTHOR

...view details