ಕಾಬೂಲ್: ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಮಂಗಳವಾರ ನಡೆದ ಅಂತ್ಯಕ್ರಿಯೆಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದಿಂದ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 56 ಮಂದಿ ಗಾಯಗೊಂಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ: 15 ಸಾವು, 56 ಮಂದಿಗೆ ಗಾಯ - afghanistan suicide blast
ಕುಜ್ ಕುನಾರ್ ಜಿಲ್ಲೆಯ ಅಫಘಾನ್ನಲ್ಲಿ ಮೃತಪಟ್ಟ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಅಂತ್ಯಕ್ರಿಯೆ ಸಂದರ್ಭದಲ್ಲಿ ಆತ್ಮಾಹುತಿ ಸ್ಫೋಟ ಸಂಭವಿಸಿದೆ.
15 killed after suicide blast hits Afghan funeral
ಕುಜ್ ಕುನಾರ್ ಜಿಲ್ಲೆಯ ಅಫಘಾನ್ನಲ್ಲಿ ಮೃತಪಟ್ಟ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಅಂತ್ಯಕ್ರಿಯೆ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಹತ್ಯೆಗೀಡಾದವರಲ್ಲಿ ಪ್ರಾಂತೀಯ ಪರಿಷತ್ ಸದಸ್ಯ ಅಬ್ದುಲ್ಲಾ ಮಲಕ್ಜೈ ಕೂಡ ಇದ್ದರು.
ಗಾಯಗೊಂಡವರಲ್ಲಿ ಗಂಭೀರ ಸ್ಥಿತಿಯಲ್ಲಿರುವ ಹಲವರನ್ನು ಕುಜ್ ಕುನಾರ್ ಮತ್ತು ಪ್ರಾಂತೀಯ ರಾಜಧಾನಿ ಜಲಾಲಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸ್ಫೋಟದ ಹಿಂದೆ ಯಾವ ಸಂಘಟನೆಗಳಿವೆ ಎಂಬುದು ತಿಳಿದಿಲ್ಲ.