ಕಾಬೂಲ್:ಅಫ್ಘಾನಿಸ್ತಾನದ ಉತ್ತರ ಕುಂದುಜ್ ಪ್ರದೇಶದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿ 14 ಉಗ್ರರನ್ನು ಹೊಡೆದುರುಳಿಸಿರುವುದಾಗಿ ತಿಳಿದು ಬಂದಿದೆ.
ಸೋಮವಾರ ರಾತ್ರಿ ಅಫ್ಘಾನ್ ವಾಯುಪಡೆ ಉತ್ತರ ಕುಂದುಜ್ ಪ್ರದೇಶದಲ್ಲಿ ನಡೆಸಿರುವ ವೈಮಾನಿಕದ ದಾಳಿಯಲ್ಲಿ ಸ್ಥಳೀಯ ತಾಲಿಬಾನ್ ಕಮಾಂಡರ್ ಅಕಾ ಹಮ್ಜಾ ಸೇರಿದಂತೆ ಆತನ ಅನುಚರರನ್ನು ಹೊಡೆದುರುಳಿಸಿದೆ ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಲಿಬಾನ್ ಉಗ್ರರು ಈ ಹಿಂದೆ ಜಿಲ್ಲಾ ಪರಿಪಾಲನ ಭವನ, ಮಿಲಿಟರಿ ಆಸ್ತಿಗಳು ಸೇರಿದಂತೆ ಇನ್ನಿತರ ಸರ್ಕಾರದ ಆಸ್ತಿ - ಪಾಸ್ತಿಗಳನ್ನು ಧ್ವಂಸಗೊಳಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಫ್ಘಾನ್ನಲ್ಲಿ ತಾಲಿಬಾನ್ ಉಗ್ರರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಕ್ರಮದಲ್ಲಿ ಅಫ್ಘಾನ್ ಸೈನಿಕರು ತಾಲಿಬಾನ್ ಉಗ್ರರ ಮೇಲೆ ನಿಗಾವಹಿಸುತ್ತಿದ್ದಾರೆ. ಆದ್ರೆ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ ತಾಲಿಬಾನ್ ಉಗ್ರ ಸಂಸ್ಥೆ ಯಾವುದೇ ಪ್ರಕಟಣೆ ಬಿಡುಗಡೆ ಮಾಡಿಲ್ಲ.