ಕರ್ನಾಟಕ

karnataka

ETV Bharat / international

ಅಫ್ಘಾನ್ ವಾಯುಪಡೆ ದಾಳಿಗೆ ತತ್ತರಿಸಿದ Taliban​: 14 ಉಗ್ರರು ಹತ - ಅಫ್ಘಾನ್ ಸಚಿವಾಲಯ

ಅಫ್ಘಾನ್ ವಾಯುಪಡೆ ನಡೆಸಿದ ದಾಳಿಯಿಂದ 14 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಉತ್ತರ ಪ್ರಾಂತ್ಯದ ಸಮಂಗನ್‌ನಲ್ಲಿದ್ದ ಉಗ್ರರ ಅಡಗುತಾಣದ ಮೇಲೆ ಸೇನೆ ದಾಳಿ ನಡೆಸಿತ್ತು.

Taliban
ತಾಲಿಬಾನ್

By

Published : Jun 22, 2021, 6:00 PM IST

ಕಾಬೂಲ್ (ಅಫ್ಘಾನಿಸ್ತಾನ): ಉತ್ತರ ಪ್ರಾಂತ್ಯದ ಸಮಂಗನ್‌ನಲ್ಲಿದ್ದ ಉಗ್ರರ ಅಡಗುತಾಣವನ್ನು ಗುರಿಯಾಗಿಸಿಕೊಂಡು ಅಫ್ಘಾನ್ ವಾಯುಪಡೆಯು ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ 14 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ದೃಢಪಡಿಸಿದೆ.

ಫಿರೋಜ್ ನಖ್ಚಿರ್ ಉಪನಗರ ಜಿಲ್ಲೆಯ ಕುಶ್ಮಾಲ್ ಗ್ರಾಮದಲ್ಲಿ ಸಂಭವಿಸಿದ ಈ ಕಾರ್ಯಾಚರಣೆಯಲ್ಲಿ ತಾಲಿಬಾನ್ ಅಡಗುತಾಣದಲ್ಲಿದ್ದ ಐದು ರಾಕೆಟ್ ಚಾಲಿತ ಗ್ರೆನೇಡ್ ಲಾಂಚರ್‌ಗಳು, ಎರಡು ಭಾರಿ ಪ್ರಮಾಣದ ಬಂದೂಕುಗಳು ಮತ್ತು ಏಳು ಆಕ್ರಮಣಕಾರಿ ರೈಫಲ್‌ಗಳನ್ನು ನಾಶಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನು ಓದಿ: ಅಫ್ಘಾನಿಸ್ತಾನದ ಪ್ರಮುಖ ಜಿಲ್ಲೆಯನ್ನು ತಮ್ಮ ವಶಕ್ಕೆ ಪಡೆದ ತಾಲಿಬಾನ್ ಉಗ್ರರು!!

ಮೇ 1 ರಂದು ಯುಎಸ್ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಹೊರಬರಲು ಪ್ರಾರಂಭಿಸಿದಾಗಿನಿಂದ ತಾಲಿಬಾನ್ ಉಗ್ರರು ಸೇನೆಯ ವಿರುದ್ಧ ಭಾರಿ ದಾಳಿಯನ್ನು ನಡೆಸಲು ಮುಂದಾಗಿತ್ತು. ಇನ್ನು ಕಳೆದ ಒಂದು ತಿಂಗಳಲ್ಲಿ 40 ಕ್ಕೂ ಹೆಚ್ಚು ಉಪನಗರ, ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಾಲಿಬಾನ್ ಹೇಳಿಕೊಂಡಿತ್ತು.

ABOUT THE AUTHOR

...view details