ಬೀಜಿಂಗ್ (ಚೀನಾ):ವಾರದ ಹಿಂದೆ ಸಂಭವಿಸಿದ್ದ ಗಣಿ ಸ್ಫೋಟದಲ್ಲಿ 22 ಜನರ ಪೈಕಿ 12 ಮಂದಿ ಜೀವಂತವಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಳಿದ 10 ಜನರು ಬದುಕಿರುವ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದುಕುಳಿದಿರುವ 12 ಮಂದಿ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಶುದ್ಧಗಾಳಿಯ ಕೊರತೆಯಿಂದ ಉಳಿದವರ ಸ್ಥಿತಿ ಹದಗೆಡುತ್ತಿದೆ ಎನ್ನಲಾಗ್ತಿದೆ.
ಕಾರ್ಮಿಕರು ಸಿಲುಕಿರುವ ಕೋಣೆಗಳಿಂದ ಅಪಾಯಕಾರಿ ಹೊಗೆಯನ್ನು ಹೊರ ಹಾಕಲು 300 ಕ್ಕೂ ಹೆಚ್ಚು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಾಧ್ಯವಾದಷ್ಟು ಎಲ್ಲರನ್ನೂ ಜೀವಂತವಾಗಿ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.