ಕರ್ನಾಟಕ

karnataka

ETV Bharat / international

ರಂಜಾನ್ ಪ್ರಾರ್ಥನೆ ವೇಳೆ ಬಾಂಬ್​​ ಸ್ಫೋಟ.. 12 ಮಂದಿ ದುರ್ಮರಣ

ಶುಕ್ರವಾರದ ಪ್ರಾರ್ಥನೆ ಸಲ್ಲಿಕೆ ಮಾಡ್ತಿದ್ದ ವೇಳೆ ಮಸೀದಿಯಲ್ಲಿ ಪ್ರಬಲ ಬಾಂಬ್​ ಸ್ಪೋಟಗೊಂಡಿದ್ದು, 12 ಜನರು ಸಾವನ್ನಪ್ಪಿದ್ದಾರೆ.

By

Published : May 14, 2021, 5:55 PM IST

Kabul mosque
Kabul mosque

ಕಾಬೂಲ್(ಆಫ್ಘಾನಿಸ್ತಾನ)​: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಹೊರವಲಯದ ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಪ್ರಬಲ ಬಾಂಬ್​ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲೇ 12 ಜನರು ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಮಸೀದಿಯ ಮುಖ್ಯಸ್ಥ ಸೇರಿ 12 ಜನರು ಸಾವನ್ನಪ್ಪಿದ್ದಾಗಿ ಕಾಬೂಲ್ ಪೊಲೀಸರು ತಿಳಿಸಿದ್ದು, ಇಲ್ಲಿಯವರೆಗೆ ಘಟನೆಯ ಜವಾಬ್ದಾರಿಯನ್ನ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ಇದನ್ನೂ ಓದಿ: ಕೋವಿಡ್ ಸೋಂಕಿತರಿಗೆ ನೆರವು: ಪೊಲೀಸರಿಂದ ಯೂತ್​ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​ನ ಪ್ರಶ್ನೆ

ಬಾಂಬ್​ ಸ್ಫೋಟಗೊಳ್ಳುತ್ತಿದ್ದಂತೆ ಮಕ್ಕಳು ಹಾಗೂ ದೊಡ್ಡವರು ಕಿರುಚಾಡಲು ಶುರು ಮಾಡಿದ್ದು, ಮಸೀದಿ ಮಹಡಿಯಲ್ಲಿ ಅನೇಕ ಶವಗಳು ಬಿದ್ದಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಾಲಿಬಾನ್ ಉಗ್ರರು ಹಾಗೂ ಅಲ್ಲಿನ ಸರ್ಕಾರದ ನಡುವೆ ಶಾಂತಿ ಒಪ್ಪಂದದ ನಡುವೆ ಕೂಡ ಈ ಸ್ಫೋಟ ಸಂಭವಿಸಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ಶಾಲೆಯಲ್ಲಿ ಬಾಂಬ್​ ಸ್ಫೋಟಗೊಂಡಿದ್ದ ಪರಿಣಾಮ 50ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಅನೇಕ ವಿದ್ಯಾರ್ಥಿಗಳಿದ್ದರು.

ABOUT THE AUTHOR

...view details