ಕೊಲಂಬೊ (ಶ್ರೀಲಂಕಾ): ಸಮುದ್ರದಲ್ಲಿ ಎಕ್ಸ್ಪ್ರೆಸ್ ಪರ್ಲ್ ಕಂಟೇನರ್ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಅನೇಕ ಜಲಚರಗಳು ಪ್ರಾಣತೆತ್ತಿವೆ. ಒಟ್ಟು 118 ಆಮೆಗಳು, 17 ಡಾಲ್ಫಿನ್ಗಳು ಮತ್ತು ನಾಲ್ಕು ತಿಮಿಂಗಿಲಗಳ ಕಳೇ ಬರಗಳು ಶ್ರೀಲಂಕಾದ ಕಡಲ ತೀರಗಳಿಗೆ ತೇಲಿ ಬಂದಿವೆ ಎಂದು ವನ್ಯಜೀವಿ ಸಂರಕ್ಷಣಾ ಇಲಾಖೆ ತಿಳಿಸಿದೆ.
ಮೇ 20 ರಂದು ಭಾರತದಿಂದ ಶ್ರೀಲಂಕಾಗೆ ಬರುತ್ತಿದ್ದ ಸಿಂಗಾಪುರದ ಎಕ್ಸ್ಪ್ರೆಸ್ ಪರ್ಲ್ ಹಡಗು ಕೊಲಂಬೊ ಬಂದರಿಗೆ ಸಮೀಪದಲ್ಲಿದ್ದಾಗ ಅಗ್ನಿ ಅವಘಡಕ್ಕೆ ಸಾಕ್ಷಿಯಾಗಿತ್ತು. 25 ಟನ್ಗಳಷ್ಟು ನೈಟ್ರಿಕ್ ಆಮ್ಲ ಹಾಗೂ ರಾಸಾಯನಿಕಗಳು - ಸೌಂದರ್ಯ ವರ್ಧಕಗಳಿದ್ದ 1,486 ಕಂಟೇನರ್ಗಳನ್ನು ಹೊತ್ತಿದ್ದ ಹಡಗು ಇದಾಗಿತ್ತು.