ಮ್ಯಾನ್ಮಾರ್: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಠ 114 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದೇಶದಾದ್ಯಂತ 44 ಪಟ್ಟಣಗಳು ಮತ್ತು ನಗರಗಳಲ್ಲಿ ನಡೆದ ಹತ್ಯೆಗಳು ಕಳೆದ ತಿಂಗಳು ನಡೆದ ಮಿಲಿಟರಿ ದಂಗೆಯ ನಂತರದ ರಕ್ತಪಾತವನ್ನು ಬಿಂಬಿಸುತ್ತಿವೆ.
ಮ್ಯಾನ್ಮಾರ್: ಮಿಲಿಟರಿ ವಿರುದ್ಧದ ದಂಗೆಯಲ್ಲಿ 114 ನಾಗರಿಕರು ಸಾವು - ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರ
ಮ್ಯಾನ್ಮಾರ್ ಮಿಲಿಟರಿ ವಿರುದ್ಧದ ದಂಗೆಯಲ್ಲಿ 114 ನಾಗರಿಕರು ಸಾವನ್ನಪ್ಪಿದ್ದಾರೆ. ಫೆಬ್ರವರಿ 1 ರ ದಂಗೆಯ ವಿರುದ್ಧ ಪ್ರತಿಭಟನಾಕಾರರು ಯಾಂಗೊನ್, ಮಾಂಡಲೆ ಮತ್ತು ಇತರ ಪಟ್ಟಣಗಳ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಮ್ಯಾನ್ಮಾರ್
13 ವರ್ಷದ ಬಾಲಕಿಯನ್ನು ಆಕೆಯ ಮನೆ ಪಕ್ಕದಲ್ಲೇ ಶೂಟ್ ಮಾಡಲಾಗಿದ್ದು, ಪ್ರತಿಭಟನಾಕಾರರ ಮೇಲೆ ಮತ್ತೆ ಗುಂಡಿನ ಸುರಿಮಳೆ ಸಾಧ್ಯತೆ ಇದೆ ಎಂದು ಅಲ್ಲಿನ ಸ್ಥಳಿಯ ಚಾನೆಲ್ಗಳು ಹೇಳಿವೆ. ಆದರೂ, ಫೆಬ್ರವರಿ 1 ರ ದಂಗೆಯ ವಿರುದ್ಧ ಪ್ರತಿಭಟನಾಕಾರರು ಯಾಂಗೊನ್, ಮಾಂಡಲೆ ಮತ್ತು ಇತರ ಪಟ್ಟಣಗಳ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಫೆಬ್ರವರಿ 1 ರಂದು, ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದಲ್ಲಿದ್ದ ಸರ್ಕಾರವನ್ನು ಉರುಳಿಸಿತು ಮತ್ತು ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿ ಒಂದು ವರ್ಷದ ಅವಧಿಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು.