ಕರ್ನಾಟಕ

karnataka

ETV Bharat / international

CPC ಗೆ ನೂರರ ಸಂಭ್ರಮ.. ಮಾರ್ಕ್ಸ್​ನಿಂದ ಜಿನ್​ಪಿಂಗ್​ವರೆಗೆ ಪಕ್ಷ ನಡೆದು ಬಂದ ಹಾದಿಯ ಚಿತ್ರಣ ಇಲ್ಲಿದೆ! - ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ

ಕಮ್ಯುನಿಸ್ಟ್ ಪಾರ್ಟಿ ಆಫ್​ ಚೀನಾ 91 ದಶಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಅವರಲ್ಲಿ ತಳಮಟ್ಟದ ಕಾರ್ಮಿಕರು, ಸಾಮಾನ್ಯ ನಾಗರಿಕ ಸೇವಕರು ಸೇರಿದಂತೆ ಎಲ್ಲಾ ಸಮುದಾಯದವರನ್ನೂ ಒಳಗೊಂಡಿದೆ.

CPC ಗೆ ನೂರರ ಸಂಭ್ರಮ
CPC ಗೆ ನೂರರ ಸಂಭ್ರಮ

By

Published : Jul 1, 2021, 9:11 AM IST

ಹೈದರಾಬಾದ್: ಕಮ್ಯುನಿಸ್ಟ್ ಪಾರ್ಟಿ ಆಫ್​ ಚೀನಾ ಸ್ಥಾಪನೆಯಾಗಿ ಇಂದಿಗೆ 100 ವರ್ಷಗಳು ಪೂರೈಸಿವೆ. ಇದರ ಭಾಗವಾಗಿ ಜುಲೈ 1, 2021 ರಂದು ಶಾಂಘೈನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವರದಿಯೊಂದರ ಪ್ರಕಾರ ಕಮ್ಯುನಿಸ್ಟ್ ಪಾರ್ಟಿ ಆಫ್​ ಚೀನಾ 91 ದಶಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಅವರಲ್ಲಿ ತಳಮಟ್ಟದ ಕಾರ್ಮಿಕರು, ಸಾಮಾನ್ಯ ನಾಗರಿಕ ಸೇವಕರು ಸೇರಿದಂತೆ ಎಲ್ಲ ಸಮುದಾಯದವರನ್ನೂ ಒಳಗೊಂಡಿದೆ. ಇದು ಚೀನಾದಲ್ಲಿನ ಪ್ರಮುಖ ನೀತಿ - ರಚನಾ ಸಂಸ್ಥೆಯಾಗಿದ್ದು, ಸರ್ಕಾರದ ಕೇಂದ್ರ, ಪ್ರಾಂತೀಯ ಮತ್ತು ಸ್ಥಳೀಯ ಅಂಗಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ.

ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ

ಸೋವಿಯತ್ ಒಕ್ಕೂಟದಲ್ಲಿ ಲೆನಿನ್​ನ ಸಮಾಜಕ್ರಾಂತಿಯ ಬಳಿಕ 1917 ರಲ್ಲಿ ಮಾರ್ಕ್ಸ್​ವಾದ ಚೀನಾದಲ್ಲಿ ವ್ಯಾಪಕ ಪ್ರಭಾವ ಬೀರಿತು. ಚೀನಾದ ಕೆಲ ಜನರು ಮಾರ್ಕ್ಸ್​ವಾದ ವಿಜಯದ ಸರಿಯಾದ ಮಾರ್ಗವೆಂದು ಭಾವಿಸಿದರು. ಇದರ ಪರಿಣಾಮ 1919 ರಲ್ಲಿ ಸಾಮ್ರಾಜ್ಯಶಾಹಿ, ಉಳಿಗಮಾನ್ಯ ಪದ್ಧತಿ ವಿರುದ್ಧ ಬೃಹತ್ ಚಳವಳಿ ನಡೆಯಿತು. ಇದು ಜನರ ಮೇಲೆ ಅಭೂತಪೂರ್ವ ಪರಿಣಾಮ ಬೀರಿತು.

ಆ ಸಮಯದಲ್ಲಿ ಚೀನಾದ ಕಾರ್ಮಿಕ ವರ್ಗ ಸ್ವತಂತ್ರವಾಯಿತು. ಮಾರ್ಕ್ಸ್​ವಾದವನ್ನು ನಂಬಿದ್ದ ಚೆನ್​ ಡುಕ್ಸಿ, ಲಿ ಡಿಜಾವೊ ಕಾರ್ಲ್​ಮಾರ್ಕ್ಸ್ ಚಿಂತನೆಗಳನ್ನು ಬಿತ್ತಲು ಕಾರ್ಮಿಕ ಚಳವಳಿಗಳನ್ನು ಸಂಘಟಿಸಲು ದೇಶಾದ್ಯಂತ ಕಮ್ಯುನಿಸ್ಟ್ ಗುಂಪುಗಳನ್ನು ಸ್ಥಾಪಿಸಿದರು. ಹೀಗೆ ಮಾರ್ಕ್ಸ್‌ವಾದವು ಚೀನಾದ ಕಾರ್ಮಿಕ ಚಳವಳಿಗಳೊಂದಿಗೆ ಸಂಯೋಜಿಸಲ್ಪಟ್ಟಿತು. ಇದು ಸಿಪಿಸಿ ಸ್ಥಾಪನೆಗೆ ಅಡಿಪಾಯವನ್ನೂ ಹಾಕಿತು.

1921 ರಲ್ಲಿ, ಸಿಪಿಸಿಯ ಮೊದಲ ರಾಷ್ಟ್ರೀಯ ಕಾಂಗ್ರೆಸ್ ಜುಲೈ 23 ಮತ್ತು 31 ರ ನಡುವೆ ನಡೆಯಿತು. ಇದರಲ್ಲಿ ಹಿ ಶುಹೆಂಗ್, ಡಾಂಗ್ ಬೀವು, ಚೆನ್ ತನ್ಕಿಯು, ವಾಂಗ್ ಜಿನ್ಮೈ, ಡೆಂಗ್ ಆನ್ಮಿಂಗ್, ಲಿ ಡಾ, ಲಿ ಹೆಂಜುನ್ ಗುಟಾವೊ, ಲಿಯು ರೆಂಜಿಂಗ್, ಚೆನ್ ಸೇರಿದಂತೆ ಗೊಂಗ್ಬೊ ಮತ್ತು ವಿವಿಧ ವರ್ಗಗಳ 50 ಜನರು ಭಾಗವಹಿಸಿದ್ದರು. ಈ ಸಮಯದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷವನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.

ಸಿಪಿಸಿಯ ಪ್ರಮುಖ ಮೈಲಿಗಲ್ಲುಗಳು

1917-20: ರಷ್ಯಾದ ಅಕ್ಟೋಬರ್ ಕ್ರಾಂತಿಯ ನಂತರ ಲೆನಿನ್, ಬೊಲ್ಶೆವಿಕ್‌ ಹರಡಿದ ಮಾರ್ಕ್ಸ್‌ವಾದಿ ಸಿದ್ಧಾಂತವು ಚೀನಾದ ಜನರಿಗೆ ಸ್ಫೂರ್ತಿ ನೀಡಿತು.

1921: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ: 1919 ರಲ್ಲಿ ವರ್ಸೈಲ್ಸ್ ಒಪ್ಪಂದಕ್ಕೆ ಚೀನಾ ಸರ್ಕಾರ ನೀಡಿದ ಪ್ರತಿಕ್ರಿಯೆಯನ್ನು ವಿರೋಧಿಸಿ ನಾಲ್ಕನೇ ಮೇ ಚಳವಳಿಯ ನಂತರ ಸಿಪಿಸಿ ಮೂಲತಃ ಅಧಿಕೃತವಾಗಿ ರಚನೆಯಾಯಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಸಿಪಿ) ಅನ್ನು ಶಾಂಘೈನಲ್ಲಿ ಮಾರ್ಕ್ಸ್​ವಾದದ ಅನುಯಾಯಿಗಳಾದ ಹದಿಮೂರು ಜನರು ಸ್ಥಾಪಿಸಿದರು, ಇದರಲ್ಲಿ ಚೆನ್ ದುಕ್ಸಿಯು ಮತ್ತು ಲಿ ದಜಾವೊ ಪ್ರಮುಖ ಪಾತ್ರ ವಹಿಸಿದರು. ಚೆನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1923: ಉತ್ತರ ಚೀನಾದ ಹೆಚ್ಚಿನ ಭಾಗವನ್ನು ನಿಯಂತ್ರಿಸುವವರನ್ನು ಮಣಿಸಲು ಕುಮಿಂಟಾಂಗ್ (ಕೆಎಂಟಿ) ರಾಷ್ಟ್ರೀಯವಾದಿ ಪಕ್ಷವು ಸಿಸಿಪಿ ಜತೆ ಮೈತ್ರಿ ಮಾಡಿಕೊಂಡಿತು.

1927: ಕೆಎಂಟಿ ನಾಯಕ ಚಿಯಾಂಗ್ ಕೈ-ಶೇಕ್ ಕಮ್ಯುನಿಸ್ಟರ ಶುದ್ಧೀಕರಣವನ್ನು ಪ್ರಾರಂಭಿಸಿದರು. ಮಾವೋ ಮತ್ತು ಸಿಸಿಪಿ ಪಡೆಗಳು ಆಗ್ನೇಯ ಚೀನಾ ಕಡೆಗೆ ಹಿಂದೆ ಸರಿದವು.

ಶಾಂಘೈ ಹತ್ಯಾಕಾಂಡ - ಕಮ್ಯುನಿಸ್ಟರ ಹತ್ಯಾಕಾಂಡಕ್ಕೆ ರಾಷ್ಟ್ರೀಯವಾದಿ ಪಕ್ಷದ ನಾಯಕ ಚಿಯಾಂಗ್ ಕೈ-ಶೇಕ್ ಆದೇಶಿಸಿದರು. ಈ ಆದೇಶವು ಕಮ್ಯುನಿಸ್ಟ್ ಕೆಂಪು ಸೈನ್ಯದ ರಚನೆಗೆ ಕಾರಣವಾಯಿತು.

1928 ಪುನರ್​ ಏಕೀಕರಣ - ಚೆನ್​​ ಸರ್ಕಾರದ ಮುಖ್ಯಸ್ಥರಾಗಿ ಬಡ್ತಿ ಪಡೆದರು. ಚಿಯಾಂಗ್‌ನ ಪ್ರಭಾವದ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಚೀನಾ ಮತ್ತೆ ಒಂದುಗೂಡಿಸುವಲ್ಲಿ ಯಶಸ್ವಿಯಾದರು.

1931ಅಂತರ್​ಯುದ್ಧ: ಕೆಂಪು ಸೇನೆ ಮತ್ತು ರಾಷ್ಟ್ರೀಯವಾದಿ ಪಕ್ಷದ ನಡುವಿನ ಹೋರಾಟವು 18 ವರ್ಷಗಳ ಸುದೀರ್ಘ ಹೋರಾಟವಾಗಿ ಬದಲಾಯಿತು.

1934: ಕೆಎಂಟಿ ಪಡೆಗಳ ಮೆರವಣಿಗೆ, ಮಾವೋ ತನ್ನ 86,000 ಅನುಯಾಯಿಗಳನ್ನು ವಾಯವ್ಯ ಚೀನಾಕ್ಕೆ ಪ್ರಯಾಣ ಬೆಳೆಸಿದರು.

1937-1945: ಎರಡನೇ ಚೀನಾ-ಜಪಾನೀಸ್ ಯುದ್ಧ - 1931 ರಲ್ಲಿ ಜಪಾನಿನ ಮಂಚೂರಿಯಾ ಆಕ್ರಮಣದೊಂದಿಗೆ ಉದ್ವಿಗ್ನತೆ ಪ್ರಾರಂಭವಾಯಿತು, ಆದರೆ, 1937 ರಲ್ಲಿ ಸ್ಫೋಟವಾಯಿತು. ಜಪಾನಿಯರು ಶಾಂಘೈ ಮತ್ತು ನಾನ್ಜಿಂಗ್ ಅನ್ನು ವಶಪಡಿಸಿಕೊಂಡ ನಂತರ ಎರಡನೇ ಮಹಾಯುದ್ಧದವರೆಗೂ ಈ ನಿಲುವು ಮುಂದುವರೆಯಿತು. ಜಪಾನ್‌ನೊಂದಿಗಿನ ಯುದ್ಧದ ಸಮಯದಲ್ಲಿ, ಸಿಸಿಪಿ ಮತ್ತು ಕೆಎಂಟಿ ನಡುವೆ ತಾತ್ಕಾಲಿಕ ಮೈತ್ರಿ ರೂಪುಗೊಂಡಿತು.

1946-49: ಸಿಸಿಪಿ ಮತ್ತು ಕೆಎಂಟಿ ನಡುವಿನ ಅಂತರ್​ಯುದ್ಧದಲ್ಲಿ ಕಮ್ಯುನಿಸ್ಟರು ಗೆದ್ದರು, ಚೀನಾದಿಂದ ತೈವಾನ್ ಬೇರೆಯಾಯಿತು.

1949: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ - ಅಂತರ್​ಯುದ್ಧದ ಹಿಂಸಾತ್ಮಕ ಅಂತ್ಯದ ಹಂತದ ನಂತರ, ಕಮ್ಯುನಿಸ್ಟ್ ಪಕ್ಷವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಘೋಷಿಸಿತು. ಎರಡು ತಿಂಗಳ ನಂತರ, ಎರಡು ಮಿಲಿಯನ್ ಸೈನಿಕರು ಚಿಯಾಂಗ್ ಕೈ-ಶೇಕ್ ಅವರನ್ನು ತೈವಾನ್‌ಗೆ ಗಡಿಪಾರು ಮಾಡಿದರು. ಅಲ್ಲಿ ಅವರು ಚೀನಾದ ಕಾನೂನುಬದ್ಧ ಆಡಳಿತ ಮಂಡಳಿ ಎಂದು ಹೇಳಿಕೊಂಡು ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದರು. ಮಾವೋ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸ್ಥಾಪನೆ ಮಾಡಿ, ರಾಷ್ಟ್ರದ ಮುಖ್ಯಸ್ಥ ಎಂದು ಹೆಸರಿಸಲಾಗಿದೆ.

1950-53 ಕೊರಿಯನ್ ಯುದ್ಧ: ಯುಎಸ್ ಬೆಂಬಲಿತ ದಕ್ಷಿಣ ಕೊರಿಯಾ ವಿರುದ್ಧ ಚೀನಾ ಉತ್ತರ ಕೊರಿಯಾವನ್ನು ಬೆಂಬಲಿಸಿತು.

1958-1962: ದಿ ಗ್ರೇಟ್ ಲೀಪ್ ಫಾರ್ವರ್ಡ್ - ಚೀನಾದ ಕೃಷಿ ನೆಲೆಯನ್ನು ಕೈಗಾರಿಕಾ ನೆಲೆಯನ್ನಾಗಿ ಪರಿವರ್ತಿಸುವ ಅಧ್ಯಕ್ಷ ಮಾವೊ ಅವರ ಅಭಿಯಾನ ಇದಕ್ಕೆ ಉತ್ತೇಜನ ನೀಡಿತು. ಇದರ ಅಡಿ, ರೈತರನ್ನು ಸಂಘಟಿಸಲಾಯಿತು. ಆದರೆ ಈ ಯೋಜನೆ ಸಂಪೂರ್ಣ ವಿಫಲವಾಯಿತು. ಅಗತ್ಯವಾದ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿನ ವೈಫಲ್ಯವು ಬರಗಾಲ ಮತ್ತು ಸುಮಾರು 56 ದಶಲಕ್ಷ ಜನರ ಸಾವಿಗೆ ಕಾರಣವಾಯಿತು. ಇದರಲ್ಲಿ 30 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು.

1966-76ದಿ ಗ್ರೇಟ್ ಪ್ರೊಲೆಟೇರಿಯನ್ ಕಲ್ಚರಲ್ ರೆವಲ್ಯೂಷನ್: ಮಾವೊಸ್ ಲಿಟಲ್ ರೆಡ್ ಬುಕ್ ಅನ್ನು ಪಕ್ಷದಲ್ಲಿ ಬೂರ್ಜ್ವಾ ಒಳನುಸುಳುವವರನ್ನು ಶುದ್ಧೀಕರಿಸಲು ಆಯುಧವಾಗಿ ಬಳಸಲಾಗುತ್ತದೆ. ಜನರಲ್ ಡೆಂಗ್ ಕ್ಸಿಯಾಪಿಂಗ್ ರೆಡ್ ಗಾರ್ಡ್ ಶಾಲೆಗಳನ್ನು ಮುಚ್ಚುತ್ತಾರೆ. ದೇಶವು ಅರಾಜಕತೆ ಮತ್ತು ಅಂತರ್​​ಯುದ್ಧಕ್ಕೆ ಸಾಕ್ಷಿಯಾಯಿತು. ಇದರಿಂದಾಗಿ ಸುಮಾರು 1.5 ಮಿಲಿಯನ್ ವಿರೋಧಿಗಳು ಬಲಿಯಾದರು.

1971: ಚೀನಾ ವಿಶ್ವಸಂಸ್ಥೆಗೆ ಸೇರಿತು

1972: ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾಕ್ಕೆ ಭೇಟಿ ನೀಡಿದರು

1976:ಮಾವೋತ್ಸೆ ತುಂಗ್​ ನಿಧನ. ಸಾಂಸ್ಕೃತಿಕ ಕ್ರಾಂತಿಯ ಶಿಕ್ಷೆಗೊಳಗಾದ ನಾಲ್ವರಲ್ಲಿ ಒಬ್ಬರಾದ ಜಿಯಾಂಗ್ ಕ್ವಿಂಗ್ ಅವರ ಬಂಧನ

1977:ಡೆಂಗ್ ಕ್ಸಿಯಾಪಿಂಗ್ ನಾಯಕನಾಗಿ ಆಯ್ಕೆ ಆದರು.

1989:ತಿಯಾನ್ಮೆನ್ ಚೌಕ್​( ಸ್ಕ್ವೇರ್): ನೂರಾರು ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರನ್ನು ಮಿಲಿಟರಿ ಪಡೆ ಹತ್ಯೆ ಮಾಡಿತು. ಇದು ಪ್ರಜಾಪ್ರಭುತ್ವ ಹತ್ತಿಕ್ಕುವ ಅತಿದೊಡ್ಡ ಹ್ಯೇಯ ಕೃತ್ಯ ಎಂದು ವಿಶ್ವದ ಇತಿಹಾಸದಲ್ಲಿ ದಾಖಲಾಗಿದೆ.

1993: ಜಿಯಾಂಗ್ ಜೆಮಿನ್ ಅಧ್ಯಕ್ಷರಾದರು.

‘ಗೋರ್ಜಸ್ ಯೋಜನೆ ’

ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ಯೋಜನೆ ಗೋರ್ಜಸ್. 1920 ರ ದಶಕದ ಆರಂಭದಲ್ಲಿ ಪ್ರಸ್ತಾಪಿಸಲಾದ ಈ ಯೋಜನೆಯಿಂದಾಗಿ 1.9 ದಶಲಕ್ಷ ಜನರನ್ನು ಸ್ಥಳಾಂತರಿಸಬೇಕಾಯಿತು. 1,200 ಪುರಾತತ್ವ ಮತ್ತು ಐತಿಹಾಸಿಕ ಸ್ಥಳಗಳು ನಾಶವಾದವು. ಅಣೆಕಟ್ಟಿನ ಕಾರ್ಯಾಚರಣೆ 2015 ರಲ್ಲಿ ಪ್ರಾರಂಭವಾಯಿತು.

1997: ಡೆಂಗ್ ನಿಧನರಾದರು, ಹಿಂಗ್ ಕಾಂಗ್ ಚೀನಾದ ಆಳ್ವಿಕೆಗೆ ಮರಳಿದರು.

2001: ಚೀನಾ ವಿಶ್ವ ವ್ಯಾಪಾರ ಸಂಸ್ಥೆಗೆ ಸೇರಿತು. ವಿದೇಶಿ ವ್ಯಾಪಾರ ಆಗ $ 475 ಬಿಲಿಯನ್‌ಗೆ ಜಿಗಿಯಿತು

2002: ಹೂ ಜಿಂಟಾವೊ 2003 ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷರಾದರು.

2008: ಯಶಸ್ವಿ ಒಲಿಂಪಿಕ್ ಕ್ರೀಡಾಕೂಟವು ವಿಶ್ವ ಸೂಪರ್ ಪವರ್ ಆಗಿ ಚೀನಾದ ಸ್ಥಾನವನ್ನು ದೃಢಪಡಿಸಿತು.

2009: ವಿಶ್ವದ ಅತಿದೊಡ್ಡ ರಫ್ತುದಾರನಾಗಿ ಚೀನಾವು ಜರ್ಮನಿಯನ್ನು ಹಿಂದಿಕ್ಕಿತು.

2012: ಕ್ಸಿ ಜಿನ್‌ಪಿಂಗ್ ಕಮ್ಯುನಿಸ್ಟ್ ಪಕ್ಷದ ನಾಯಕ ಮತ್ತು ಅಧ್ಯಕ್ಷರಾದರು

2013: ಬೆಲ್ಟ್ ಮತ್ತು ರಸ್ತೆ ಉಪಕ್ರಮ: ಪೂರ್ವ ಏಷ್ಯಾದಿಂದ ಯುರೋಪಿಗೆ ಹೊಸ 'ಸಿಲ್ಕ್ ರಸ್ತೆ' ಸಂಪರ್ಕವನ್ನು ನಿರ್ಮಿಸಲು ಅಧ್ಯಕ್ಷ ಜಿನ್‌ಪಿಂಗ್ ಸಹಿ ಹಾಕಿದರು.

2018: ಜಿನ್‌ಪಿಂಗ್‌ ಅಧ್ಯಕ್ಷರಾಗಲು ಅವಕಾಶವಾಗುವಂತೆ ಚೀನಾದ ಸಂವಿಧಾನವನ್ನು ಬದಲಾಯಿಸಲಾಯಿತು.

2019 ಹಾಂಕಾಂಗ್​ ಪ್ರತಿಭಟನೆಗಳು: ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ನಂತರ, ಬೀಜಿಂಗ್ ನೇರ ಸರ್ವಾಧಿಕಾರಿ ಆಡಳಿತವನ್ನು ಹೇರಿತು. ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಶಾಸನವು ಹಾಂಕಾಂಗ್​ ಸ್ವಾಯತ್ತತೆಯನ್ನು ಆಡಳಿತ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ರಾಜಕೀಯ ಸಿದ್ಧಾಂತದೊಂದಿಗೆ ಬದಲಾಯಿಸುತ್ತದೆ.

2020: ಚೀನಾ ಮತ್ತು ಕೋವಿಡ್

2019 ರ ಡಿಸೆಂಬರ್​ನಲ್ಲಿ ಕಾಣಿಸಿಕೊಂಡ ಕೋವಿಡ್​ ಅನ್ನು ಚೀನಾ, ಇತರ ದೇಶಗಳಿಂದ ಮುಚ್ಟಿಟ್ಟಿತು. ವೈರಸ್ ನಿಯಂತ್ರಣಕ್ಕೆ ತರಲು ವಿಫಲವಾದಾಗ ಏಕಾಏಕಿ ವಿಶ್ವದಾದ್ಯಂತ ಕೋವಿಡ್ ಸ್ಫೋಟಗೊಂಡಿತು. ಇದರಿಂದಾಗಿ ವಿಶ್ವದ ಹಲವಾರು ರಾಷ್ಟ್ರಗಳು ಚೀನಾದ ವಿರುದ್ಧ ತಿರುಗಿಬಿದ್ದವು.

ಚೀನಾದ ಕಮ್ಯುನಿಸ್ಟ್ ಪಕ್ಷದ ನಿರ್ಣಾಯಕ ಕ್ಷಣ

ಲಾಂಗ್ ಮಾರ್ಚ್ ಪ್ರಮುಖ ಸಾಧನೆ: ಕೆಎಂಟಿ ಪಡೆಗಳು 1933 ರಲ್ಲಿ ಜಿಯಾಂಗ್​ಕ್ಸಿ ಮತ್ತು ಫುಜಿಯಾನ್ ಪ್ರಾಂತ್ಯಗಳಲ್ಲಿನ ಸಿಸಿಪಿ ಭದ್ರಕೋಟೆಗಳ ಮೇಲೆ ದಾಳಿ ಮಾಡಿದವು. ಕೆಎಂಟಿ ಪಡೆಗಳು ಅಂತಿಮವಾಗಿ ಸಿಸಿಪಿ ನೆಲೆಗಳನ್ನು ಸುತ್ತುವರಿದವು. ದಿಗ್ಬಂಧನ ಯಶಸ್ವಿಯಾಗಿ ವರ್ಷದೊಳಗೆ ಕಮ್ಯುನಿಸ್ಟರು ತಮ್ಮ ಭೂಪ್ರದೇಶದ ಶೇಕಡಾ 50 ರಷ್ಟು ಹಾಗೂ ಸುಮಾರು 60,000 ಸೈನಿಕರನ್ನು ಕಳೆದುಕೊಂಡರು.

ಸಿಸಿಪಿ ತನ್ನ ನೆಲೆಯನ್ನು ಹುನಾನ್ ಪ್ರಾಂತ್ಯದ ಕಮ್ಯುನಿಸ್ಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ಧರಿಸಿತು. CCP ಅಕ್ಟೋಬರ್ 1934 ರಲ್ಲಿ ಪೂರ್ಣ ಹಿಮ್ಮೆಟ್ಟುವಿಕೆಯನ್ನು ಪ್ರಾರಂಭಿಸಿತು, ಹೀಗಾಗಿ ಲಾಂಗ್ ಮಾರ್ಚ್ ಪ್ರಾರಂಭವಾಯಿತು.

ಆ ಸಮಯದಲ್ಲಿ, ಸಿಸಿಪಿ ಸೈನ್ಯವನ್ನು ಒಟ್ಟೊ ಬ್ರಾನ್ ಎಂಬ ಹೆಸರಿನಿಂದ ಜರ್ಮನ್ ಕಮಿಂಟರ್ನ್ ನೇತೃತ್ವ ವಹಿಸಿದ್ದರು. ಕೆಎಂಟಿ ಪಡೆಗಳನ್ನು ಅನುಸರಿಸಲು ಹಲವಾರು ವಿನಾಶಕಾರಿ ನಷ್ಟಗಳನ್ನು ಅನುಭವಿಸಿದ ನಂತರ ಬ್ರೌನ್ ಅವರ ನಾಯಕತ್ವವನ್ನು ಮಾವೋತ್ಸೆ ತುಂಗ್ ಮತ್ತು ಇತರ ಚೀನಾದ ನಾಯಕರು ಪ್ರಶ್ನಿಸಿದರು.

ಸಿಸಿಪಿ ಸೈನ್ಯದ ಭವಿಷ್ಯದ ನಾಯಕತ್ವವನ್ನು ನಿರ್ಧರಿಸಲು 1935 ರ ಜನವರಿಯಲ್ಲಿ ಜುನಿ ಸಮ್ಮೇಳನ ನಡೆಯಿತು. ಮಾವೊ ತನ್ನ ಕಾರ್ಯತಂತ್ರದಿಂದ ಪಕ್ಷವನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಬ್ರೌನ್‌ನಿಂದ ಸೈನ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಈ ಹೊತ್ತಿಗೆ, ಸಿಸಿಪಿ ಎಲ್ಲಾ ರೀತಿಯ ವಿದೇಶಿ ಪ್ರಭಾವವನ್ನು ಅಲ್ಲಾಡಿಸಿತ್ತು ಮತ್ತು ತನ್ನದೇ ಆದ 'ಮೂಲ' ನಾಯಕತ್ವವನ್ನು ಅನುಸರಿಸಲು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿತ್ತು.

ಬ್ರೌನ್‌ರ ಒನ್​ - ಒನ್ ಯುದ್ಧ ಯೋಜನೆಗಳಿಗೆ ವ್ಯತಿರಿಕ್ತವಾಗಿ, ಮಾವೊ ಕೆಎಂಟಿ ಪಡೆಗಳ ವಿರುದ್ಧ ಕಾರ್ಯತಂತ್ರದ ಗೆರಿಲ್ಲಾ ದಾಳಿಯನ್ನು ಪ್ರತಿಪಾದಿಸಿದರು. ಅವರ ನಿರ್ದೇಶನದಲ್ಲಿ ಸಿಸಿಪಿ ಪಡೆಗಳನ್ನು ಸಣ್ಣ ಗುಂಪುಗಳಾಗಿ ವಿಭಜಿಸಲಾಯಿತು. ಶತ್ರುಗಳನ್ನು ಹಿಮ್ಮೆಟ್ಟಿಸಲು ಶಾಂಕ್ಸಿ ಪ್ರಾಂತ್ಯದ ಕಮ್ಯುನಿಸ್ಟ್ ಪ್ರದೇಶಗಳಿಗೆ ಮುನ್ನಡೆಯಲು ಸೇನೆಗೆ ಸೂಚಿಸಲಾಯಿತು. ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಈ ಹೋರಾಟ ಸುಮಾರು ಒಂದು ವರ್ಷ ತೆಗೆದುಕೊಂಡು ಅಕ್ಟೋಬರ್ 1935 ರಲ್ಲಿ ಕೊನೆಗೊಂಡಿತು. ಸಿಸಿಪಿ ಪಡೆಗಳು 9,000 ಕಿ.ಮೀ.ಗಿಂತಲೂ ಹೆಚ್ಚು ಪರ್ವತ ಪ್ರದೇಶಗಳು, ದಟ್ಟವಾದ ಜವುಗು ಪ್ರದೇಶಗಳು ಮತ್ತು ಪ್ರತಿಕೂಲ ಪ್ರದೇಶಗಳನ್ನು ಸ್ಥಳೀಯ ಮುಖ್ಯಸ್ಥರ ನಿಯಂತ್ರಣದಲ್ಲಿ ಸಾಗಿದವು. ಕನಿಷ್ಠ 77 ಸೈನಿಕರು ಈ ಹೋರಾಟದಲ್ಲಿ ತಮ್ಮ ಪ್ರಾಣ ಕಳೆದುಕೊಂಡರು.

ಮೊದಲಿಗೆ 87000 ಸೈನಿಕರೊಂದಿಗೆ ಆರಂಭವಾದ ಪ್ರಯಾಣದಲ್ಲಿ ಕೊನೆಗೆ ಉಳಿದಿದ್ದು 10,000 ಕ್ಕಿಂತ ಕಡಿಮೆ ಸೈನಿಕರು. ಈ ಭಾರಿ ನಷ್ಟಗಳ ಹೊರತಾಗಿಯೂ, ಈ ಹೋರಾಟದ ಪ್ರಯಾಣವು ಚೀನಾದ ಹೆಚ್ಚಿನ ಭಾಗಗಳ ಮೂಲಕ ಸಿಸಿಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮಾಡಿತು. ಉಳಿದಿರುವ ಸದಸ್ಯರು ದೇಶದ ಬಗ್ಗೆ ಹೆಚ್ಚು ತಿಳಿದು ಕೊಂಡರು. ಅವರ ಪ್ರಯತ್ನಗಳನ್ನು ಉಲ್ಲೇಖಿಸಲು, ಮಾವೋತ್ಸೆ ತುಂಗ್​ ಮತ್ತು ಪಕ್ಷವು ಚೀನಾದ ಅನೇಕ ಗ್ರಾಮೀಣ ಸಮುದಾಯಗಳಿಂದ ಪ್ರಶಂಸೆ ಮತ್ತು ಜನಪ್ರಿಯ ಬೆಂಬಲವನ್ನು ಪಡೆಯಿತು.

ಚೀನಾದ ಪ್ರಮುಖ ಸಾಧನೆಗಳು

ಚೀನಾದ ಬಡತನ ನಿವಾರಣಾ ಕಾರ್ಯಕ್ರಮ: ವಿಶ್ವಬ್ಯಾಂಕ್ ಪ್ರಕಾರ, 1978 ರಿಂದ ಈವರೆಗೆ ಚೀನಾ 800 ದಶಲಕ್ಷಕ್ಕೂ ಹೆಚ್ಚು ಜನರನ್ನು ಸಂಪೂರ್ಣ ಬಡತನದಿಂದ ಮುಕ್ತಗೊಳಿಸಿದೆ. ಇಷ್ಟು ಕಡಿಮೆ ಸಮಯದಲ್ಲಿ ಬಡತನ ನಿರ್ಮೂಲನೆ ಮಾಡಿರುವ ಮೊದಲ ದೇಶ ಎಂಬ ಹೆಗ್ಗಳಿಕೆಯೂ ಚೀನಾದ ಕಮ್ಯುನಿಸ್ಟ್​ ಸರ್ಕಾರ ಹೆಗ್ಗಳಿಕೆ.

ಕ್ಸಿ ಜಿನ್‌ಪಿಂಗ್ 2012 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರಧಾನ ಕಾರ್ಯದರ್ಶಿಯಾದಾಗ, ಸುಮಾರು 100 ಮಿಲಿಯನ್ ಜನರು ಬಡತನ ರೇಖೆಗಿಂತ ಕೆಳಗಿದ್ದರು. 2020 ರ ಅಂತ್ಯದ ವೇಳೆಗೆ ಚೀನಾ ಸಂಪೂರ್ಣವಾಗಿ ಬಡತನ ಮುಕ್ತವಾಗಲಿದೆ ಎಂದು ಪ್ರತಿಜ್ಞೆ ಮಾಡಿದರು. 2020 ರ ಡಿಸೆಂಬರ್‌ನಲ್ಲಿ ಅವರು ಗುರಿ ಸಾಧಿಸಲಾಗಿದೆ ಎಂದು ಘೋಷಿಸಿದರು.

ಉದ್ದೇಶಗಳನ್ನು ಸಾಧಿಸಲು ಕ್ರಮ: ಸಿಪಿಸಿ ಪಕ್ಷ, ಇಡೀ ಆರ್ಥಿಕತೆ ಸಮಾಜದ ಶಕ್ತಿಯನ್ನು ಸಜ್ಜುಗೊಳಿಸಿತು. ಬಡತನ ನಿರ್ಮೂಲನೆ ಮಾಡಲು 3 ದಶಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಗ್ರಾಮೀಣ ಪ್ರದೇಶಗಳಿಗೆ ಕಳಿಸಲಾಯಿತು.

2007 ರಲ್ಲಿ ಚೀನಾದ ಮೊದಲ ಹೈಸ್ಪೀಡ್ ರೈಲು ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಮಾರ್ಗದ ಉದ್ದ 37,900 ಕಿ.ಮೀ ನಷ್ಟಿದ್ದು, ವಿಶ್ವದ ಎಲ್ಲ ದೇಶಗಳಲ್ಲಿನ ಸಂಯೋಜಿತ ಹೈಸ್ಪೀಡ್ ರೈಲ್ವೆಯ ಮೂರನೇ ಎರಡರಷ್ಟಿದೆ. ಇದು ಗಂಟೆಗೆ 600 ಕಿ.ಮೀ ಚಲಿಸಲಿದೆ.

ಚೀನಾ 2003 ರಿಂದ ಇಬ್ಬರು ಮಹಿಳೆಯರು ಸೇರಿದಂತೆ 11 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಮೇ 2021 ರಲ್ಲಿ, ಇದು ರೋವರ್ ಜೊತೆಗೆ ಮಂಗಳದಲ್ಲಿ ಟಿಯಾನ್ಮೆನ್​ -1 ಅನ್ನು ಯಶಸ್ವಿಯಾಗಿಸಿತು. ಭೂಮಿಯ ಕಕ್ಷೆಯಲ್ಲಿ ಹೆಚ್ಚು ಕಾಲ ಉಳಿಯಲು ಚೀನಾ ಮೂರು ಗಗನಯಾತ್ರಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿತು.

2019 ರಲ್ಲಿ (ಕೋವಿಡ್ ಹರಡುವ ಮೊದಲು) ಚೀನಾ 66 ಮಿಲಿಯನ್ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿತು. ಹೊಸ ಸಾರ್ವಜನಿಕ ಉದ್ಯಾನವನಗಳನ್ನು ನಿರ್ಮಿಸಲು ಚೀನಾ ವಾರ್ಷಿಕವಾಗಿ 15 ಬಿಲಿಯನ್ ಖರ್ಚು ಮಾಡುತ್ತದೆ.

ABOUT THE AUTHOR

...view details