ಕರ್ನಾಟಕ

karnataka

ETV Bharat / international

ಆಟೋರಿಕ್ಷಾ ಬ್ಲಾಸ್ಟ್​: ಒಬ್ಬನ ಸಾವು, 7 ಜನರ ಸ್ಥಿತಿ ಗಂಭೀರ - ಪಾಕಿಸ್ತಾನದಲ್ಲಿ ಆಟೋ ರಿಕ್ಷಾ ಬ್ಲಾಸ್ಟ್​

ವಾಧೈ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಬ್ಲಾಸ್ಟ್ ಆಗಿದೆ. ಪರಿಣಾಮ ಒಬ್ಬ ಸಾವಿಗೀಡಾದರೆ ಹಲವರು ಗಂಭೀರ ಗಾಯಗೊಂಡಿದ್ದಾರೆ. ಈ ಪ್ರಕರಣದ ಸಂಬಂಧ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

1 killed, 7 injured in autorickshaw blast in Pakistan's Rawalpindi
ಆಟೋರಿಕ್ಷಾ ಬ್ಲಾಸ್ಟ್

By

Published : Dec 4, 2020, 7:52 PM IST

ರಾವಲ್ಪಿಂಡಿ(ಪಾಕಿಸ್ತಾನ): ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕ್‌ನ ರಾವಲ್ಪಿಂಡಿಯಲ್ಲಿ ಜರುಗಿದೆ.

ಪಿರ್ ವಾಧೈ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಬ್ಲಾಸ್ಟ್​ ಆಗಿದೆ. ಈ ಹಿನ್ನೆಲೆ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ಅವರನ್ನು ಗುರುತಿಸುವ ಪ್ರಯತ್ನ ಕೂಡ ನಡೆಯುತ್ತಿವೆ ಎಂದು ನಗರ ಸಬ್ ಇನ್ಸ್‌ಪೆಕ್ಟರ್ ಸಜ್ಜದುಲ್ ಹಸನ್ ಅವರು ತಿಳಿಸಿದ್ದಾರೆ.

ಬಾಂಬ್ ವಿಲೇವಾರಿ ದಳ ಮತ್ತು ಸಂಬಂಧಪಟ್ಟ ಎಲ್ಲ ಕಾನೂನು ಜಾರಿ ಸಂಸ್ಥೆಗಳು ಘಟನಾ ಸ್ಥಳದಲ್ಲಿದ್ದು, ಆ ಪ್ರದೇಶದಲ್ಲಿ ಸೂಕ್ಷ್ಮ ತನಿಖೆ ನಡೆಸುತ್ತಿವೆ. ಘಟನೆ ಯಾಕೆ ನಡೆಯಿತು ಎಂಬ ಬಗ್ಗೆ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ABOUT THE AUTHOR

...view details