ನವದೆಹಲಿ: ಅಮೆರಿಕದ ಉಪಾಧ್ಯಕ್ಷಿಯ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಇತ್ತೀಚಿಗೆ ತಮ್ಮ ಟ್ವಿಟರ್ನಲ್ಲಿ ಹೃದಯ ಸ್ಪರ್ಶಿ ವಿಡಿಯೋ ಶೇರ್ ಮಾಡಿದ್ದಾರೆ.
'ನೀನು ಅಧ್ಯಕ್ಷೆ ಆಗಬಹುದು'; ನಾಲ್ಕು ವರ್ಷದ ಮಗುವಿಗೆ ಕಮಲಾ ಹ್ಯಾರಿಸ್ ಪಾಠ! - ಭಾರತೀಯ ಮೂಲದ ಕಮಲಾ ಹ್ಯಾರಿಸ್
ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಕಮಲಾ ಹ್ಯಾರಿಸ್ ಬಿಡುವಿನ ಸಮಯದಲ್ಲಿ ತಮ್ಮ ಸೊಸೆ ಜತೆ ಕಾಲ ಕಳೆದಿದ್ದಾರೆ.
!['ನೀನು ಅಧ್ಯಕ್ಷೆ ಆಗಬಹುದು'; ನಾಲ್ಕು ವರ್ಷದ ಮಗುವಿಗೆ ಕಮಲಾ ಹ್ಯಾರಿಸ್ ಪಾಠ! Kamala Harris](https://etvbharatimages.akamaized.net/etvbharat/prod-images/768-512-9466387-392-9466387-1604745661105.jpg)
ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕಾಗಿ ಕಣಕ್ಕಿಳಿದಿರುವ ಹ್ಯಾರಿಸ್, ತಮ್ಮ ನಾಲ್ಕು ವರ್ಷದ ಸೋದರ ಸೊಸೆ ಅಮರಾ ಅಜಾಗು ಅವರೊಂದಿಗೆ ಪ್ರೀತಿಯಿಂದ ತೊಡೆಯ ಮೇಲೆ ಕುಳಿರಿಸಿಕೊಂಡು ಮಾತನಾಡಿದ್ದಾರೆ. ಈ ವೇಳೆ, ನೀನು ಅಮೆರಿಕ ಅಧ್ಯಕ್ಷರಾಗಬಹುದು ಎಂದು ಹ್ಯಾರಿಸ್ ಹೇಳಿದ್ದಾರೆ. ಜತೆಗೆ 35 ವರ್ಷದ ನಂತರ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಡೆಮಾಕ್ರಟಿಕ್ ಸೆನೆಟರ್ ಆಗಿರುವ ಮೀನಾ ಅವರ 4 ವರ್ಷದ ಮಗಳು ಅಮರಾ. ಸದ್ಯ ಅಮೆರಿಕದಲ್ಲಿ ವಾಸವಾಗಿದ್ದು, ಅವರೊಂದಿಗೆ ಹ್ಯಾರಿಸ್ ಮಾತುಕತೆ ನಡೆಸುತ್ತಿದ್ದ ವೇಳೆ, ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಮೀನಾ ಹ್ಯಾರಿಸ್ ಈ ವಿಡಿಯೋ ಪೋಸ್ಟ್ ಮಾಡಿದ್ದು, ನನ್ನ ಮಗಳು ಅಧ್ಯಕ್ಷೆ ಮತ್ತು ಗಗನಯಾತ್ರಿ ಆಗಲು ಬಯಸುತ್ತಾಳೆ ಎಂದಿದ್ದಾರೆ.