ಕರ್ನಾಟಕ

karnataka

ETV Bharat / international

ಕೈಗಾರಿಕೆಗಳು ಬೇರೆ ಗ್ರಹಗಳಿಗೆ ಶಿಫ್ಟ್.. ಭೂಮಿ ಉಳಿಸಲು 'Amaze'ಜಾನ್ ಕನಸು.. - etv bharat

ಬಾಲ್ಯದಿಂದ ಬಾಹ್ಯಾಕಾಶದತ್ತ ಪಯಣಿಸುವ ಕನಸು ಕಾನುತ್ತಿರುವ ಬ್ಲ್ಯೂ ಒರಿಜಿನ್ ಅನ್ನೋ ಬಾಹ್ಯಾಕಾಶ ಕಂಪನಿಯ ಒಡೆಯ ಅದಕ್ಕಾಗಿ ಲೆಕ್ಕವಿಲ್ಲದಷ್ಟು ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಮುಂದಿನ ಪೀಳಿಗೆಗಳು ಚಲನಶೀಲವಾಗಲು ಒಂದಿಷ್ಟು ಹೆಚ್ಚಿನ ಕಾಳಜಿ ತೋರಿಸಿರುವ ಬಿಜೋಸ್, ತಮ್ಮ ಇಡೀ ಜೀವಿತಾವಧಿಯಲ್ಲೇ ಈ ಬಗ್ಗೆ ಚಿಂತಿಸಿದ್ದಾರೆ.

ಅಮೇಜಾನ್ ಸಿಇಒ ಜೆಫ್ ಬಿಜೋಸ್

By

Published : Jul 22, 2019, 8:14 PM IST

ನವದೆಹಲಿ: ಕನಸು.. ಜಗತ್ತಿನ ಬಹುತೇಕ ಆವಿಷ್ಕಾರ, ಸಾಧನೆಗಳಿಗೆ ಮೂಲ. ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯೊಬ್ಬರಿಗೆ ಒಂದು ಕನಸಿದೆ. ಈ ಭೂಮಿಯನ್ನ ಉಳಿಸಬೇಕು. ಹಾಗಾಗಿ ಅದಕ್ಕೊಂದು ಅದ್ಭುತ ಕನಸು ಕಂಡಿದ್ದಾರೆ. ಅವರದು ಕೈಗೆ ನಿಲುಕದ, ಆಗಸವನ್ನೂ ಮೀರಿದ ಕನಸು.

ಬಾಹ್ಯಾಕಾಶ ಕಂಪನಿಗೆ ಹಣದ ಹೊಳೆ ಹರಿಸಲಿರುವ ಕುಬೇರ!

ಅಮೇಜಾನ್ ಸಿಇಒ ಜೆಫ್ ಬಿಜೋಸ್ ಜಗತ್ತಿನಲ್ಲಿಯೇ ಅತೀ ಶ್ರೀಮಂತ. ಬಹುತೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ ಬಿಜೋಸ್, ಬಾಹ್ಯಾಕಾಶ ಸಂಶೋಧನೆಗಾಗಿಯೇ ತಮ್ಮ ಬಹುಪಾಲು ಆಸ್ತಿಯನ್ನ ಹೂಡಿಕೆ ಮಾಡ್ತಿದ್ದಾರೆ. ಮನುಷ್ಯನಿಂದಾಗಿ ಈ ಭೂಮಿ ಸಂಪೂರ್ಣ ವಿನಾಶವಾದ್ರೇ ಬ್ಯಾಕಪ್ ಇನ್ನೊಂದು ಪ್ಲಾನ್ ಬೇಕಲ್ವೇ.. ಬ್ಲ್ಯೂ ಒರಿಜಿನ್ ಅನ್ನೋ ಬಾಹ್ಯಾಕಾಶ ಕಂಪನಿಯ ಒಡೆಯ ಅದಕ್ಕಾಗಿ ಲೆಕ್ಕವಿಲ್ಲದಷ್ಟು ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಮುಂದಿನ ಪೀಳಿಗೆಗಳು ಚಲನಶೀಲವಾಗಲು ಒಂದಿಷ್ಟು ಹೆಚ್ಚಿನ ಕಾಳಜಿ ತೋರಿಸಿರುವ ಬಿಜೋಸ್, ತಮ್ಮ ಇಡೀ ಜೀವಿತಾವಧಿಯಲ್ಲೇ ಈ ಬಗ್ಗೆ ಚಿಂತಿಸಿದ್ದಾರೆ.

ಅಮೇಜಾನ್ ಸಿಇಒ ಜೆಫ್ ಬಿಜೋಸ್

ಆರ್ಮಸ್ಟ್ರಾಂಗ್ ಗೂ ಮೊದಲೇ ಆಗಸದತ್ತ ಪಯಣಿಸುವ ಗುರಿ!

ಈ ಕುಬೇರನಿಗೆ ಬಾಲ್ಯದಲ್ಲೇ ಬಾಹ್ಯಾಕಾಶ ಕ್ಷೇತ್ರದ ಆಕರ್ಷಣೆ. ಬಾಹ್ಯಾಕಾಶದತ್ತ ಪಯಣಿಸುವ ಕನಸು. ಆಲ್ಡೀನ್ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಮೊದಲು ಪಾದವಿರಿಸುವುದಕ್ಕೂ ಮೊದಲೇ ಜೆಫ್ ಬಿಜೋಸ್ ಬೇರೆ ಗ್ರಹಗಳ ಮೇಲೆ ಕಣ್ಣಿಟ್ಟಿದ್ರಂತೆ. ಅಲ್ಲಿಗೆ ಪಯಣಿಸುವ ಗುರಿ ಇರಿಸಿಕೊಂಡಿದ್ರಂತೆ.

ಉತ್ಪದನಾ ಕೈಗಾರಿಕೆಗಳು ಶಿಫ್ಟ್ ಮಾಡಿದ್ರೇಆಗಭೂಮಿ ಸೇಫ್!

'ಮಾನವ ಜನಾಂಗದ ಪೈಪೋಟಿ ಎದುರಿಸಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ದೊಡ್ಡ ಸವಾಲು. ಈಗಾಗಲೇ ದೊಡ್ಡ ಜನಸಂಖ್ಯೆ ಹೊಂದಿದ್ದೇವೆ. ಮುಂದೊಂದು ದಿನ ಮನುಷ್ಯರು ಬದುಕಲು ಭೂಮಿ ಚಿಕ್ಕದಾಗುತ್ತೆ. ಅತಿ ಕೈಗಾರಿಕೆಗಳಿಂದ ಮಾಲಿನ್ಯ ಹೆಚ್ಚುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮ ಈಗ ಎದುರಿಸುತ್ತಿದ್ದೇವೆ. ಹಂತ ಹಂತವಾಗಿ ಈ ಭೂಮಿ ನಾಶಪಡಿಸುತ್ತಿದ್ದೇವೆ. ಹಾಗಾಗಿ ಉತ್ಪಾದನಾ ಕೈಗಾರಿಕೆಗಳನ್ನೇ ಬೇರೆ ಗ್ರಹಗಳಿಗೆ ಶಿಫ್ಟ್ ಮಾಡಿದ್ರೇ ಮಾಲಿನ್ಯ ಸಂಪೂರ್ಣ ಹತೋಟಿಗೆ ತರಲು ಸಾಧ್ಯ' ಅಂತಾರೆ ಜೆಫ್ ಬಿಜೋಸ್.

ಬಾಹ್ಯಾಕಾಶ (ಸಂಗ್ರಹ ಚಿತ್ರ)

ಪ್ರತಿ ಗ್ರಹಗಳನ್ನೂ ಭಿನ್ನ ಸಂಗತಿಗಳಿಗೆ ಬಳಸಿಕೊಂಡ್ರೇ ಒಳೀತು!

ಸಂಕೀರ್ಣ ಸಂಗತಿಗಳನ್ನ ತುಂಬಾ ಸರಳಗೊಳಿಸುವ ವಿಧಾನವಿದು. ಮೈಕ್ರೋಪ್ರೊಸೆಸರ್ಗಳು ಸೇರಿ ಸಾಕಷ್ಟು ತಂತ್ರಜ್ಞಾನದಲ್ಲಿ ಪ್ರಾಬಲ್ಯ ಸಾಧಿಸಿದ್ದೇವೆ. ಹೆಚ್ಚು ಸಂಕೀರ್ಣ ವಸ್ತುಗಳನ್ನ ಬೇರೆ ಗ್ರಹಗಳಿಂದಲೇ ಉತ್ಪಾದನೆ ಮಾಡಿ, ಅಲ್ಲಿಂದಲೇ ಭೂಮಿಗೆ ವಾಪಸ್ ತರುವಂತಾಗಬೇಕು. ಹೀಗಾದ್ರೇ, ದೊಡ್ಡ ಕೈಗಾರಿಕೆಗಳು ಮತ್ತು ಅವುಗಳಿಂದಾಗುವ ಮಾಲಿನ್ಯ ತಡೆ ಸಾಧ್ಯ. ಆಗ ಭೂಮಿ ಬರೀ ವಾಸಯೋಗ್ಯ ವಲಯವಾಗುತ್ತೆ. ಪ್ರತಿ ಗ್ರಹಗಳೂ ಒಂದೊಂದು ವೈಶಿಷ್ಟ್ಯ ಹೊಂದಿವೆ. ಯಾವ ವೈಶಿಷ್ಟ್ಯ ಯಾವ ಗ್ರಹಕ್ಕೆ ಹೊಂದುತ್ತೋ ಅದೇ ವಲಯವನ್ನಾಗಿ ಅವುಗಳನ್ನ ಪರಿವರ್ತಿಸಬೇಕು. ಇದನ್ನ ಸಾಧಿಸಲು ನೂರಾರು ವರ್ಷಗಳೇ ಬೇಕು. ಅದಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನಾ ಕ್ಷೇತ್ರ ಇನ್ನಷ್ಟು ವೇಗವಾಗಿ ಬೆಳೆಯಬೇಕಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಇಷ್ಟೊಂದು ಹಣ ಹೂಡಿಕೆಗೆ ಮುಂದಾಗಿದ್ದಾರಂತೆ ಬಿಜೋಸ್.

ಅಮೇಜಾನ್ ಸಿಇಒ ಜೆಫ್ ಬಿಜೋಸ್ ಕಂಡ ಕನಸಿನ ಕೂಸು ಬ್ಲ್ಯೂ ಒರಿಜಿನ್..

ದುಬಾರಿ ಕನಸು ನನಸಾದ್ರೇ ಭೂಮಿ ಮೇಲಿನ ಬದುಕು ಸಹ್ಯ!

ಇದು ಕೇಳಲು ಕ್ರೇಜಿ ಎನಿಸಿದ್ರೂ 100 ವರ್ಷ ಇಲ್ಲ ಅದಕ್ಕೂ ಮೊದಲೇ ಈ ಕನಸುಗಳೆಲ್ಲ ನನಸಾಗ್ತವೆ ಅಂತಾರೆ ಅದ್ಭುತ ಕನಸುಗಾರ ಜೆಫ್ ಬಿಜೋಸ್. ಎಲ್ಲ ಮೈಲುಗಲ್ಲುಗಳಿಗೂ ಮೂಲ ಕನಸು. ಆರಂಭ ಸಣ್ಣದಾಗಿರುತ್ತೆ. ಮುಂದೆ ಅದು ದೊಡ್ಡದಾಗಿಯೇ ತೀರುತ್ತೆ. ಜಗತ್ತಿನ ಈ ಶ್ರೀಮಂತ ವ್ಯಕ್ತಿಯ ದುಬಾರಿ ಕನಸು ನನಸಾಗಲಿ. ಭೂಮಿ ಮೇಲಿನ ಬದುಕು ಸಹ್ಯವಾಗಲಿ..

ABOUT THE AUTHOR

...view details