ಆಕೆಯ ವಯಸ್ಸು 17. ಹೆಚ್ಚು ಹೆಸರು ಗಳಿಸಿರುವುದು ತನ್ನ ಕಾಲಿನ ಉದ್ದದ ಕಾರಣಕ್ಕೆ. 6 ಅಡಿ 10 ಇಂಚು ಎತ್ತರ ಇರುವ ಈ ಹುಡುಗಿ ವಿಶ್ವದ ಅತೀ ಉದ್ದದ ಕಾಲುಗಳನ್ನು ಹೊಂದಿರುವವರಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾಳೆ.
ಮ್ಯಾಕಿ ಕರ್ರಿನ್ ಈ ದಾಖಲೆ ಬರೆದವಳು. ಈಕೆ ಸದ್ಯ ಅಮೆರಿಕಾದ ಟೆಕ್ಸಿನ್ನಲ್ಲಿ ನೆಲೆಸಿದ್ದಾಳೆ. ತನ್ನ ಎತ್ತರದ ಕಾರಣಕ್ಕೆ ಶಾಪಿಂಗ್ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ಎಲ್ಲರೂ ಧರಿಸುವ ಬಟ್ಟೆಯನ್ನು ಇವರಿಗೆ ತೊಡಲು ಆಗುವುದಿಲ್ಲ. ಮ್ಯಾಕ್ಸಿ ಕರ್ರಿನ್ ಹೆತ್ತವರು ಮತ್ತು ಆಕೆಯ ಸಂಬಂಧಿಕರಲ್ಲಿ ಇವರಷ್ಟು ಯಾರೂ ಎತ್ತರವಿಲ್ಲ.
ಮ್ಯಾಕ್ಸಿ ಕರ್ರಿನ್ ತನ್ನ ಕಾಲುಗಳ ಎತ್ತರದ ಕಾರಣಕ್ಕೇ ನೊಂದಿದ್ದರು. ಇರಿಸುಮುರಿಸು ಅನುಭವಿಸುತ್ತಿದ್ದರು. ಆದರೆ, ಬಳಿಕ ತನ್ನ ಎತ್ತರವನ್ನೇ ಹೆಮ್ಮೆ ಎಂಬಂತೆ ಸ್ವೀಕರಿಸಿ ಧೈರ್ಯದಿಂದ ಬದುಕಲು ದಾರಿ ಮಾಡ್ತಿದೆ ಅಂತಾರೆ ಮ್ಯಾಕಿ.
ದೇಹಗಿಂತ ಕಾಲುಗಳೇ ಎತ್ತರ!
ಮ್ಯಾಕಿ ಕರ್ರಿನ್ ಕಾಲುಗಳು ಆಕೆಯ ದೇಹಗಿಂತ ಎತ್ತರವಾಗಿವೆ. ಸುಮಾರು ಒಂದೂವರೆ ಮೀಟರ್ನಷ್ಟು ಕಾಲುಗಳು ಎತ್ತರವಾಗಿವೆ.
ಬಲಗಾಲಿಗಿಂತ ಎಡಗಾಲು ಎತ್ತರ...
ಇನ್ನು ಮ್ಯಾಕಿ ಕರ್ರಿನ್ನ ಬಲಗಾಲಿಗಿಂತ ಎಡಗಾಲೇ ಎತ್ತರವಾಗಿದೆ. ಆಕೆಯ ಬಲಗಾಲು 134.3 ಸಿ.ಎಂ ಇದ್ರೆ, ಎಡಗಾಲು 135.2 ಸಿ.ಎಂ ಇದೆ.
ಈ ಹೈಟ್ ರಾಣಿಗೆ ವಾಲಿಬಾಲ್ ಇಷ್ಟ...!
ಇವರು ತಮ್ಮ ಕಾಲುಗಳನ್ನು ಎಷ್ಟು ಇಷ್ಟ ಪಡುತ್ತಾರೋ ಅಷ್ಟೇ ವಾಲಿಬಾಲ್ ಆಟವನ್ನೂ ಇಷ್ಟ ಪಡುತ್ತಾರೆ. ಎತ್ತರವಾದ ಕಾಲುಗಳಿಂದ ವಾಲಿಬಾಲ್ ಆಟವಾಡಲು ಇಷ್ಟಪಡುತ್ತಾರಂತೆ ಮ್ಯಾಕಿ.
ನನ್ನ ಎತ್ತರದ ಕಾರಣಕ್ಕೇ ಚಿಂತಿತಳಾಗಿದ್ದೆ. ಒಂದಷ್ಟು ಜನ ನನ್ನ ಮನಸ್ಸಿಗೆ ನೋವುಂಟು ಮಾಡುತ್ತಿದ್ದರು. ಆದರೆ ಈಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಯುಕೆಯಲ್ಲಿ ಕಾಲೇಜ್ ಕಲಿತು ಮಾಡೆಲಿಂಗ್ ಕೇತ್ರದಲ್ಲಿ ದಾಖಲೆ ನಿರ್ಮಿಸುವ ಆಶಯ ಹೊಂದಿದ್ದೇನೆ ಅಂತಾರೆ ಮ್ಯಾಕಿ ಕರ್ರಿನ್.
ಮ್ಯಾಕಿ ಬಟ್ಟೆ ಖರೀದಿಸುವ ಸಂದರ್ಭದಲ್ಲಿ ಕೊಂಚ ಸಮಸ್ಯೆ ಎದುರಿಸುತ್ತಾರಂತೆ. ಯಾಕೆಂದರ ತಮ್ಮ ಅಳತೆಗೆ ಬೇಕಾದಂತಹ ಬಟ್ಟೆಗಳು ಸಿಗುವುದು ಕಷ್ಟ. ಜೊತೆಗೆ, ಸಣ್ಣ ಕೋಣೆ, ಸಣ್ಣ ಬಾಗಿಲುಗಳು ಇದ್ದಂತಹ ಸಂದರ್ಭದಲ್ಲೂ ಕಷ್ಟ ಎದುರಾಗುತ್ತದೆ. ಇವುಗಳಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ ಎನ್ನುವುದು ಮ್ಯಾಕಿ ಕರ್ರಿನ್ ಮಾತು.