ಕರ್ನಾಟಕ

karnataka

ETV Bharat / international

ಕೃತಕ ಗರ್ಭಧಾರಣೆ ಮೂಲಕ ಜನಿಸಿವೆ ಚಿರತೆ ಮರಿಗಳು! - ಕೃತಕ ಗರ್ಭಧಾರಣಾ ವ್ಯವಸ್ಥೆ

ಕೊಲಂಬಸ್ ಮೃಗಾಲಯದಲ್ಲಿ ಕೃತಕ ಗರ್ಭಧಾರಣೆ ಮೂಲಕ ಎರಡು ಚಿರತೆ ಮರಿಗಳು ಜನಿಸಿವೆ. ಕ್ಯಾಮೆರಾದ ಮೂಲಕ ಚಿರತೆ ಮರಿಗಳ ಜನನ ಪ್ರಕ್ರಿಯೆಯನ್ನು ಗಮನಿಸಲಾಗುತ್ತಿತ್ತು.

cheethah
cheethah

By

Published : Feb 25, 2020, 9:25 PM IST

ಪೊವೆಲ್( ಅಮೆರಿಕ):ಕೃತಕ ಗರ್ಭಧಾರಣೆಯ ಮೂಲಕ ಎರಡು ಚಿರತೆ ಮರಿಗಳಿಗೆ ಪಶು ತಜ್ಞರು ಜನ್ಮ ನೀಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಡಿಗೆ ತಾಯಿಯ ಮೂಲಕ ಜನಿಸಿದ ಚಿರತೆ ಮರಿಗಳು ಇವಾಗಿವೆ ಎಂದು ಓಹಿಯೋ ಮೃಗಾಲಯದ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಕೊಲಂಬಸ್ ಮೃಗಾಲಯದಲ್ಲಿರುವ 3 ವರ್ಷದ ಇಜ್ಜಿ ಎಂಬ ಚಿರತೆಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿ ಜನಿಸಿವೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕ್ಯಾಮೆರಾದ ಮೂಲಕ ಚಿರತೆ ಮರಿಗಳ ಜನನ ಪ್ರಕ್ರಿಯೆಯ ಕಣ್ಣಿಡಲಾಗಿತ್ತು.

ಕ್ಯಾಮೆರಾ ಮೂಲಕ ಚಿರತೆ ಮರಿಗಳ ಜನನ ಪ್ರಕ್ರಿಯೆ ಮೇಲೆ ನಿಗಾ

ಮರಿಗಳ ಜೈವಿಕ ತಾಯಿಯಾಗಿರುವ 6 ವರ್ಷದ ಚಿರತೆ ಕಿಬಿಬಿ, ಇದುವರೆಗೂ ಮರಿಗಳಿಗೆ ಜನ್ಮ ನೀಡಿಲ್ಲ. ಇದೀಗ ಕಿಕಿಬಿಗೆ ಬಹಳ ವಯಸ್ಸಾಗಿದ್ದು, ನೈಸರ್ಗಿಕ ಗರ್ಭಧಾರಣೆಯೂ ಸಾಧ್ಯವಿಲ್ಲ. ಹೀಗಾಗಿ ಕೃತಕ ಗರ್ಭಧಾರಣೆ ಮೂಲಕ ಎರಡು ಚಿರತೆಗಳಿಗೆ ಜನ್ಮ ನೀಡಲಾಗಿದೆ.

ಈ ರೀತಿಯ ಕೃತಕ ಗರ್ಭಧಾರಣಾ ವ್ಯವಸ್ಥೆಯು ಭವಿಷ್ಯದಲ್ಲಿ ಚಿರತೆಗಳ ಜನಸಂಖ್ಯೆಯನ್ನು ನಿರ್ವಹಿಸಲು ಉಪಯೋಗವಾಗಲಿದೆ ಎಂದು ಮೃಗಾಲಯದ ಉಪಾಧ್ಯಕ್ಷ ಡಾ. ರ್ಯಾಂಡಿ ಜಂಗೆ ಹೇಳಿದ್ದಾರೆ. ಈ ಹಿಂದೆ ಮೂರು ಬಾರಿ ಇದೇ ವಿಧಾನದ ಮೂಲಕ ಗರ್ಭಧಾರಣೆಗೆ ಪ್ರಯತ್ನಿಸಲಾಗಿತ್ತು. ಆದರೆ ಅದು ಇದುವರೆಗೂ ಸಾಧ್ಯವಾಗಿರಲಿಲ್ಲ. ಇಷ್ಟಾದರೂ ಪ್ರಯತ್ನ ಬಿಡದ ತಜ್ಞರು, ಈ ಪ್ರಯೋಗದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details