ನ್ಯೂಯಾರ್ಕ್ (ಅಮೆರಿಕ):ಮಹಾತ್ಮ ಗಾಂಧಿ ಜನ್ಮದಿನ ಹಿನ್ನೆಲೆ ವಿಶ್ವಸಂಸ್ಥೆಯಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಶನಿವಾರ ಮಹಾತ್ಮ ಗಾಂಧಿಗೆ ನಮನ ಅರ್ಪಿಸಿದ್ದಾರೆ. ಇಡೀ ಜಗತ್ತು ಗಾಂಧಿಯ ಶಾಂತಿ ಸಂದೇಶ ಕೇಳಬೇಕಿದೆ. ಜೊತೆಗೆ ನಂಬಿಕೆ ಮತ್ತು ಸಹಿಷ್ಣುತೆಯ ಹೊಸ ಯುಗಕ್ಕೆ ನಾಂದಿಹಾಡಬೇಕು ಎಂದಿದ್ದಾರೆ.
ಜಗತ್ತು ಗಾಂಧಿ ಶಾಂತಿ ಸಂದೇಶ ಕೇಳಬೇಕಿದೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ - ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ
ಗಾಂಧೀಜಿಯ 152ನೇ ಜನ್ಮದಿನ ಹಿನ್ನೆಲೆ ಅವರ ಸಮಾಧಿ ರಾಜ್ಘಾಟ್ಗೆ ಹಲವು ನಾಯಕರು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಹ ಟ್ವೀಟ್ ಮಾಡಿ ಗಾಂಧಿ ನೆನಪಿಸಿಕೊಂಡಿದ್ದಾರೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
ಇದು ಶಾಂತಿ, ಸಹಿಷ್ಣುತೆ ಮತ್ತು ವಿಶ್ವಾಸತೆಯ ಹೊಸ ಯುಗ ಆರಂಭಿಸುವ ಸಮಯವಾಗಿದೆ. ಗಾಂಧೀಜಿ ಹುಟ್ಟಿದ ದಿನ ಈ ದಿನ ವಿಶ್ವ ಅಹಿಂಸಾ ದಿನದಂದು ಶಾಂತಿಯ ಸಂದೇಶ ಪಾಲಿಸೋಣ ಮತ್ತು ಭವಿಷ್ಯದಲ್ಲಿ ಶಾಂತಿ ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಗುಟೆರೆಸ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಘಾಟ್ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ: ಮಹಾತ್ಮ ಗಾಂಧಿಗೆ ನಮನ.. ಗಣ್ಯರಿಂದ ರಾಷ್ಟ್ರಪಿತನ ಸ್ಮರಣೆ!