ಕರ್ನಾಟಕ

karnataka

ETV Bharat / international

ಆಫ್ಘನ್​ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ - Guterres

ಅಫ್ಘಾನಿಸ್ತಾನದಲ್ಲಿ ಉಗ್ರರನ್ನು ನಿಗ್ರಹಿಸಲು ವಿಶ್ವದ ಎಲ್ಲ ರಾಷ್ಟ್ರಗಳು ಒಂದಾಗಬೇಕಿದೆ ಎಂದು ವಿಶ್ವಸಂಸ್ಥೆ ಕರೆ ನೀಡಿದೆ.

ಗುಟೆರಸ್
ಗುಟೆರಸ್

By

Published : Aug 16, 2021, 9:06 PM IST

Updated : Aug 16, 2021, 9:27 PM IST

ವಿಶ್ವಸಂಸ್ಥೆ (ಅಮೆರಿಕ): ತಾಲಿಬಾನ್​ ಉಗ್ರರ ರಣಕೇಕೆಗೆ ಅಫ್ಘಾನಿಸ್ತಾನ​ ಅಕ್ಷರಶಃ ನಲುಗಿ ಹೋಗಿದೆ. ಅಫ್ಘಾನಿಸ್ತಾನದಲ್ಲಿ ಜಾಗತಿಕ ಭಯೋತ್ಪಾದನೆ ಬೆದರಿಕೆ ನಿಗ್ರಹಿಸಲು ವಿಶ್ವದ ಎಲ್ಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ನಡೆಸಿ ಮಾತನಾಡಿದ ಗುಟೆರಸ್, ಅಫ್ಘಾನಿಸ್ತಾನವನ್ನು ಎಂದಿಗೂ ಭಯೋತ್ಪಾದಕ ಸಂಘಟನೆಗಳಿಗೆ ವೇದಿಕೆಯಾಗಿ ಅಥವಾ ಸುರಕ್ಷಿತ ತಾಣವಾಗಿ ಬಳಸದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆ ವಿಶ್ವದ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

‘ಆಫ್ಘನ್ನರು ನಮ್ಮ ಬೆಂಬಲಕ್ಕೆ ಅರ್ಹರು’

ಆಫ್ಘನ್ನರು ನಮ್ಮ ಹೆಮ್ಮೆಯ ಜನರು. ಅವರಿಗೆ ತಲೆಮಾರುಗಳ ಯುದ್ಧ ಮತ್ತು ಕಷ್ಟಗಳು ತಿಳಿದಿವೆ. ಅವರೆಲ್ಲ ನಮ್ಮ ಸಂಪೂರ್ಣ ಬೆಂಬಲಕ್ಕೆ ಅರ್ಹರಾಗಿದ್ದಾರೆ. ಮುಂದಿನ ದಿನಗಳು ನಿರ್ಣಾಯಕವಾಗಿರಲಿದ್ದು, ಇಡೀ ಜಗತ್ತು ಅವರೊಂದಿಗೆ ನಿಲ್ಲಬೇಕಿದೆ ಎಂದು ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.

ಆಘ್ಘನ್​ ಸ್ಥಿತಿಗೆ ಭಾರತ ಕಳವಳ

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿದೆ. ಕಾಬೂಲ್​ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ದುರದೃಷ್ಟಕರ. ಮಹಿಳೆಯರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏರ್ಪೋರ್ಟ್​ನಲ್ಲಿ ಗುಂಡು ಹಾರಿಸಿದ ಘಟನೆಗಳು ನಡೆದಿರೋದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

‘ಆಹಾರ ಪೂರೈಕೆ ಮಾಡುತ್ತೇವೆ’

ಆಫ್ಘನ್​ ಬಿಕ್ಕಟ್ಟಿಗೆ ಸಿಲುಕಿರುವ ಜನರಿಗೆ ಯಾವುದೇ ನೆರವು ಸಿಗುತ್ತಿಲ್ಲ. ವಿಶ್ವ ಆಹಾರ ಕಾರ್ಯಕ್ರಮದ ಪ್ರಕಾರ, 500 ಟನ್‌ಗಳಷ್ಟು ಆಹಾರವನ್ನು ತಾಲಿಬಾನ್​ ವಶಪಡಿಸಿಕೊಂಡಿದೆ. ಈ ಹಿನ್ನೆಲೆ, ಅವರಿಗೆ ಆಹಾರ ಪೂರೈಕೆ ಸೇರಿ ನೆರವಿನ ಕಾರ್ಯಗಳು ಆರಂಭಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಒತ್ತಾಯಿಸಿದ್ದಾರೆ. ಅಲ್ಲದೇ, ಆಫ್ಘನ್ನರಿಗೆ ಬೇಕಾದ ಆಹಾರ, ಪುನರ್ವಸತಿಯನ್ನು ಅಮೆರಿಕ ನೀಡಲಿದೆ. ಅಫ್ಘಾನಿಸ್ತಾನದ ಜನತೆಗೆ ನೆರೆಯ ರಾಷ್ಟ್ರಗಳು ಆಶ್ರಯ ನೀಡಬೇಕು ಎಂದು ಅವರು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಆಫ್ಘನ್​​ನ ರಾಯಭಾರ ಕಚೇರಿಯಲ್ಲಿ 200 ಭಾರತೀಯರು... ರಕ್ಷಣೆಗೆ ಧಾವಿಸಿದ ಏರ್​​​ಫೋರ್ಸ್​ ವಿಮಾನ

ತಾಲಿಬಾನ್ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಈಗಾಗಲೇ ಕೆಲ ನೆರೆಹೊರೆ ರಾಷ್ಟ್ರಗಳನ್ನು ಹುಡುಕಲು ಆರಂಭಿಸಿದೆ ಎಂದು ಯುಎನ್‌ಸಿ ತುರ್ತು ಸಭೆಯಲ್ಲಿ ಅಫ್ಘಾನಿಸ್ತಾನದ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ ಗುಲಾಂ ಎಂ ಇಸಾಜೈ ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯರ ಸ್ಥಳಾಂತರಕ್ಕಾಗಿ ಹಿಂದೂ, ಸಿಖ್ ಸಮುದಾಯದವರ ಸಂಪರ್ಕದಲ್ಲಿದ್ದೇವೆ: ಅರಿಂದಮ್ ಬಾಗ್ಚಿ

Last Updated : Aug 16, 2021, 9:27 PM IST

ABOUT THE AUTHOR

...view details