ವಿಶ್ವಸಂಸ್ಥೆ: ಮುಂದಿನ ವಾರ ನಡೆಯಲಿರುವ ಯುಎನ್ ಜನರಲ್ ಅಸೆಂಬ್ಲಿಯ ದೊಡ್ಡ ಸಭೆಯಲ್ಲಿ ಮಾತನಾಡಲು ವಿಶ್ವ ನಾಯಕರು ಕೊರೊನಾ ಲಸಿಕೆ ಹಾಕಿಸಿಕೊಂಡಿರಬೇಕು ಎಂಬ ನಿಯಮ ತರಲಾಗಿದೆ. ಈ ಬಗ್ಗೆ ಅಸೆಂಬ್ಲಿ ನಾಯಕ ಮತ್ತು ನ್ಯೂಯಾರ್ಕ್ ಸಿಟಿ ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಾಂಕ್ರಾಮಿಕ ಸಮಯದಲ್ಲಿ ಪ್ರಪಂಚದ ಮೊದಲ ಕಾರ್ಯಕ್ರಮವನ್ನು ಇದಾಗಿದ್ದು, ಪತ್ರವೊಂದರಲ್ಲಿ ಉಲ್ಲೇಖ ಮಾಡಿರುವ ನಗರ ಅಂತಾರಾಷ್ಟ್ರೀಯ ವ್ಯವಹಾರಗಳ ಆಯುಕ್ತ ಪೆನ್ನಿ ಅಬೇವರ್ದನ ಅವರು ಅಧಿಕಾರಿಗಳು ಸಭಾಂಗಣವನ್ನು "ಕನ್ವೆನ್ಶನ್ ಸೆಂಟರ್" ಎಂದು ಪರಿಗಣಿಸಿದ್ದಾರೆ ಆದ್ದರಿಂದ ಇದು ಲಸಿಕೆ ಅಗತ್ಯತೆಗೆ ಒಳಪಟ್ಟಿರುತ್ತದೆ ಎಂದು ಹೇಳಿದ್ದಾರೆ.
ಎಲ್ಲ ಯುಎನ್ಜಿಎಗಳನ್ನು (UN General Assembly) ರಕ್ಷಣೆ ಮಾಡಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಸೇರಲು ನಾವೂ ಹೆಮ್ಮೆಪಡುತ್ತೇವೆ. ಪಾಲ್ಗೊಳ್ಳುವವರು ಮತ್ತು ನಮ್ಮ ಸಹವರ್ತಿ ನ್ಯೂಯಾರ್ಕ್ ನಿವಾಸಿಗಳು ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೇಯರ್ ಬಿಲ್ ಡಿ ಬ್ಲಾಸಿಯೊ ಬುಧವಾರದ ತಮ್ಮ ಹೇಳಿಕೆಯಲ್ಲಿ, ನಗರದಲ್ಲಿ ಉಚಿತ ಲಸಿಕೆಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಹಾಗೆ ಜಿ.ಎ. ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಅವರು ಲಸಿಕೆ ಹಾಕುವ ಅಗತ್ಯತೆಯನ್ನು ಸ್ವೀಕರಿಸಿದ್ದಾರೆ. ಹಾಗೆ ಇದನ್ನು ನಾವು ಸಾಮಾನ್ಯ ಸಭೆಗೆ ಮರಳುವ ಪ್ರಮುಖ ಹೆಜ್ಜೆ ಎಂದು ಕರೆದಿದ್ದಾರೆ.
ಆದರೆ, ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಯುಎನ್ನಲ್ಲಿ ರಾಷ್ಟ್ರಗಳ ಹಕ್ಕುಗಳ ಮೇಲೆ "ಸ್ಪಷ್ಟವಾಗಿ ತಾರತಮ್ಯದ" ಉಲ್ಲಂಘನೆಯಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುನ್ನೆಚ್ಚರಿಕೆಗಳನ್ನು ಮೀರಿದ ಯಾವುದೇ ಕ್ರಮಗಳನ್ನು ಪರಿಚಯಿಸಬಾರದು ಎಂದು ನಾವು ನಂಬುತ್ತೇವೆ ಇದರಿಂದ ಸದಸ್ಯ ರಾಷ್ಟ್ರಗಳು ಜಿಎ ಸಭೆಯಲ್ಲಿ ಭಾಗವಹಿಸುವುದನ್ನು ತಡೆಯುತ್ತದೆ ಎಂದು ಅವರು ಶಾಹಿದ್ಗೆ ಪತ್ರ ಬರೆದಿದ್ದಾರೆ.
ತುರ್ತುಸಭೆಗೆ ವಿನಂತಿ: