ವಾಷಿಂಗ್ಟನ್:ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ಮಧ್ಯೆ ಯಾರೂ ತಲೆದೂರಿಸಕೂಡದು ಎಂಬರಷ್ಯಾದ ಬೆದರಿಕೆಯ ಮಧ್ಯೆಯೂ ವಿಶ್ವಬ್ಯಾಂಕ್ ದಾಳಿಯಿಂದ ತತ್ತರಿಸಿರುವ 'ಉಕ್ರೇನ್ಗೆ ತಕ್ಷಣಕ್ಕೆ ಹಣಕಾಸಿನ ನೆರವು ನೀಡಲು ಸಿದ್ದ' ಎಂದು ಘೋಷಿಸಿದೆ.
ಉಕ್ರೇನ್ಗೆ ತಕ್ಷಣದ ಆರ್ಥಿಕ ನೆರವು ಒದಗಿಸಲು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಪಾಲುದಾರ ದೇಶಗಳಿಗೆ ವಿಶ್ವಬ್ಯಾಂಕ್ ಸಮೂಹವು ತ್ವರಿತವಾಗಿ ಹಣಕಾಸು ಸಹಾಯ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡಲು ಸಿದ್ಧ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಉಕ್ರೇನ್‌ನಲ್ಲಿ ರಷ್ಯಾ ದಾಳಿಯಿಂದಾಗುತ್ತಿರುವ ಹಿಂಸಾಚಾರ ಮತ್ತು ಜೀವಹಾನಿಗೆ ವಿಶ್ವ ಬ್ಯಾಂಕ್ ಆತಂಕಗೊಂಡಿದೆ. ಉಕ್ರೇನ್, ವಿಶ್ವಬ್ಯಾಂಕ್ನ ದೀರ್ಘಕಾಲದ ಪಾಲುದಾರ ಸದಸ್ಯ ರಾಷ್ಟ್ರವಾಗಿದೆ. ಈ ನಿರ್ಣಾಯಕ ಸಮಯದಲ್ಲಿ ಆ ದೇಶದ ಬೆಂಬಲವಾಗಿ ನಿಲ್ಲಲಾಗುವುದು ಎಂದು ವಿಶ್ವ ಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿಕೆ ನೀಡಿದ್ದಾರೆ.