ವಾಷಿಂಗ್ಟನ್:ಇಡೀ ವಿಶ್ವದ ತುಂಬೆಲ್ಲ ಕಾಲ್ಲಿಟ್ಟು ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ಅನೇಕರ ಪ್ರಾಣ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಕೊರೊನಾ ಸೇಫ್ ಹ್ಯಾಂಡ್ ಚಾಲೆಂಜ್ ಅಭಿಯಾನ ಸಹ ಶುರುಗೊಂಡಿದೆ.
ಇದೆಂಥಾ ಹುಚ್ಚಾಟ: ಕೊರೊನಾ ವೈರಸ್ ಚಾಲೆಂಜ್ ಎಂದು ಟಾಯ್ಲೆಟ್ ನೆಕ್ಕಿದ ಮಾಡೆಲ್! - ಕೊರೊನಾ ವೈರಸ್ ಚಾಲೆಂಜ್
ಮಹಾಮಾರಿ ಕೊರೊನಾ ವಿರುದ್ಧ ಇದೀಗ ಸಮರವೇ ಸಾರಲಾಗಿದ್ದು, ಇದರ ಮಧ್ಯೆ ಮಾಡೆಲ್ವೋರ್ವಳು ಹುಚ್ಚಾಟ ಮೆರೆದಿದ್ದಾಳೆ.
![ಇದೆಂಥಾ ಹುಚ್ಚಾಟ: ಕೊರೊನಾ ವೈರಸ್ ಚಾಲೆಂಜ್ ಎಂದು ಟಾಯ್ಲೆಟ್ ನೆಕ್ಕಿದ ಮಾಡೆಲ್! Woman licks plane toilet seat for coronavirus challenge](https://etvbharatimages.akamaized.net/etvbharat/prod-images/768-512-6460888-thumbnail-3x2-wdfdfd.jpg)
Woman licks plane toilet seat for coronavirus challenge
ಕೊರೊನಾ ವೈರಸ್ ಚಾಲೆಂಜ್ ಮಾಡಲು ಹೋಗಿ ಇದೀಗ ಮಾಡೆಲ್ವೋರ್ವಳು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ನೆಟಿಜನ್ಸ್ ಆಕೆಯ ವಿರುದ್ಧ ಮುಗಿಬಿದ್ದಿದ್ದಾರೆ. ಮಾಡೆಲ್ ಟಾಯ್ಲೆಟ್ ನೆಕ್ಕಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.
ಅಮೆರಿಕದ ಮೂಲದ ಅವಾ ಲೌಸಿ ಈ ವಿಡಿಯೋ ಮಾಡಿ ತನ್ನ ಟ್ಟಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಜತೆಗೆ ವಿಮಾನದಲ್ಲಿ ಯಾವ ರೀತಿಯಾಗಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಿ ಎಂದು ಬರೆದಿದ್ದಾಳೆ. ಮಾರ್ಚ್ 15ರಂದೇ ಈ ವಿಡಿಯೋ ಮಾಡೆಲ್ ಶೇರ್ ಮಾಡಿದ್ದಾಳೆ.