ವಾಷಿಂಗ್ಟನ್ : 40 ವರ್ಷದ ಮಹಿಳೆ ತನ್ನ ಪತಿ ಮರಣದ 14 ತಿಂಗಳ ನಂತರ ಹೆಪ್ಪುಗಟ್ಟಿದ ಭ್ರೂಣ ಬಳಸಿ ಮಗುವಿಗೆ ಜನ್ಮ ನೀಡಿದ್ದಾರೆ. ಸಾರಾ ಶೆಲೆನ್ ಬರ್ಗರ್ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ಮಗುವಿಗೆ ಮೆಡಿಸಿನ್ ಎಂದು ಹೆಸರಿಟ್ಟಿದ್ದಾಳೆ. ಈ ರೀತಿ ಮಗುವನ್ನು ಪಡೆದಿರುವುದು ಅವಾಸ್ತವ ಅನುಭವವನ್ನು ನೀಡಿದೆ ಎಂದು ಆಕೆ ಪ್ರತಿಪಾದಿಸಿದ್ದಾರೆ. 2020ರ ಫೆಬ್ರವರಿಯಲ್ಲಿ ಸಾರಾ ತನ್ನ 41 ವರ್ಷದ ಪತಿ ಸ್ಕಾಟ್‌ನನ್ನು ಹೃದಯಾಘಾತದಿಂದ ಕಳೆದುಕೊಂಡಿದ್ದರು.
ಅಮೆರಿಕದ ಒಕ್ಲಹೋಮ ಮೂಲದ ಶಿಕ್ಷಕಿಯಾಗಿರುವ ಸಾರಾ, ಈ ರೀತಿ ಮಗುವನ್ನು ಪಡೆಯುವ ನಿರ್ಧಾರವನ್ನು ಪತಿ ಬೆಂಬಲಿಸುತ್ತಿದ್ದರು. ಪತಿ ಮರಣದ ಆರು ತಿಂಗಳ ನಂತರ ಬಾರ್ಬಡೋಸ್ ಫರ್ಟಿಲಿಟಿ ಕ್ಲಿನಿಕ್‌ಗೆ ಹೋಗಿ ಗರ್ಭಿಣಿಯಾಗುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇನೆ.
ಎಲ್ಲವೂ ಯಶಸ್ವಿಯಾದ ವರ್ಷಗಳ ನಂತರ ಗರ್ಭಧರಿಸಲು ಸಾಧ್ಯವಾಯಿತು ಎಂದು ವಿವರಿಸಿದ್ದಾರೆ. ನನಗೆ, ಬೇರೆ ದಾರಿ ಇರಲಿಲ್ಲ. ನಾನು ಗರ್ಭಿಣಿಯಾಗಲು ಮತ್ತು ನಮ್ಮ ಮಕ್ಕಳನ್ನು ಈ ಜಗತ್ತಿಗೆ ಕರೆತರಲು ಪ್ರಯತ್ನಿಸಬೇಕಾಗಿಯಿತು ಎಂದು ಹೇಳಿದ್ದಾರೆ.
ನನ್ನ ಪತಿ ಹಾಗೂ ನಾನು ಕನಿಷ್ಠ ಮೂರು ಮಕ್ಕಳನ್ನು ಪಡೆಯಬೇಕೆಂದು ಬಯಸಿದ್ದೆವು ಎಂಬುದನ್ನ ಬಹಿರಂಗ ಪಡೆಸಿರುವ 40 ವರ್ಷದ ಸಾರಾ, ಸ್ಕಾಟ್ ಮಗುವನ್ನು ಹೊಂದಲು ತುಂಬಾ ಉತ್ಸುಕರಾಗಿದ್ದರು. ಹುಟ್ಟುವ ಮಕ್ಕಳಿಗೆ ಯಾವ ಹೆಸರಿಡಬೇಕು ಅಂತಲೂ ಲಿಸ್ಟ್‌ವೊಂದನ್ನು ತಯಾರಿಸಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.