ಕರ್ನಾಟಕ

karnataka

ETV Bharat / international

ಆಫ್ಘನ್ ರಾಯಭಾರಿ ಕಚೇರಿ ತೊರೆಯಲು ಅಮೆರಿಕ ಸಜ್ಜು: ಕಾಬೂಲ್ ಹೊಸ್ತಿಲಲ್ಲಿ ತಾಲಿಬಾನ್! - ಅಮೆರಿಕ ರಾಯಭಾರ ಕಚೇರಿ

ಅಮೆರಿಕದ ರಾಯಭಾರಿ ಕಚೇರಿಯ ಸಿಬ್ಬಂದಿಯ ಸುರಕ್ಷಿತವಾಗಿ ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಳ್ಳಲು ಅನುವಾಗುವಂತೆ ಹೆಚ್ಚುವರಿಯಾಗಿ ಮೂರು ಸಾವಿರ ಸೈನಿಕರನ್ನು ಅಮೆರಿಕ ಕಳುಹಿಸಿದೆ.

With Taliban at Kabul's doorstep, US embassy officials rush to destroy classified documents
ಆಫ್ಘನ್ ರಾಯಭಾರಿ ಕಚೇರಿ ತೊರೆಯಲು ಅಮೆರಿಕ ಸಜ್ಜು: ಕಾಬೂಲ್ ಹೊಸ್ತಿಲಲ್ಲಿ ತಾಲಿಬಾನ್!

By

Published : Aug 14, 2021, 1:22 PM IST

ಕಾಬೂಲ್, ಅಫ್ಘಾನಿಸ್ತಾನ:ಅಮೆರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಅಫ್ಘಾನಿಸ್ತಾನದ ರಾಯಭಾರ ಕಚೇರಿಯಿಂದ ಹೊರಡಲು ಸಜ್ಜಾಗಿದ್ದು, ತಾಲಿಬಾನಿಗಳು ಅಕ್ಷರಶಃ ಕಾಬೂಲ್​ನ ಬಾಗಿಲಲ್ಲಿದ್ದಾರೆ.

ಕಾಬೂಲ್​ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಸಿಬ್ಬಂದಿ ತಮ್ಮ ರಾಷ್ಟ್ರಕ್ಕೆ ಸ್ಥಳಾಂತರಗೊಳ್ಳಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವೊಂದು ದಾಖಲೆಗಳನ್ನು ನಾಶಪಡಿಸುವ ಕಾರ್ಯವೂ ಮುಂದುವರೆದಿದೆ.

ಅಫ್ಘಾನಿಸ್ತಾನದಲ್ಲಿ ಒಟ್ಟು 34 ಪ್ರಾಂತೀಯ ರಾಜಧಾನಿಗಳಿದ್ದು, ಅರ್ಧದಷ್ಟು ರಾಜಧಾನಿಗಳು ಅಥವಾ ಅಫ್ಘಾನಿಸ್ತಾನದ ಮೂರನೇ ಎರಡು ಭಾಗವನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ. ಇನ್ನೆರಡು ವಾರಗಳಲ್ಲಿ ಎಲ್ಲ ವಿದೇಶಿ ಸೇನೆಗಳು ಅಫ್ಘಾನಿಸ್ತಾನವನ್ನು ತೊರೆಯಲಿವೆ.

ಈ ಬಗ್ಗೆ ಅಮೆರಿಕ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದು, ಪ್ರಮುಖ ಗಡಿಗಳು, ಹೆದ್ದಾರಿಗಳು, ಸಂವಹನ ಕಚೇರಿಗಳನ್ನು ತಾಲಿಬಾನಿಗಳು ವಶಕ್ಕೆ ತೆಗೆದುಕೊಳ್ಳುವ ಮೂಲಕ ಕಾಬೂಲ್​ ಅನ್ನು ಪ್ರತ್ಯೇಕಗೊಳಿಸಲು ಮುಂದಾಗಿದ್ದಾರೆ ಎಂದಿದೆ.

ಅಫ್ಘಾನಿಸ್ತಾನ ತೊರೆಯುವ ಅಮೆರಿಕದ ಎಲ್ಲ ರಾಯಭಾರ ಕಚೇರಿ ನೌಕರರು ಮತ್ತು ಸಿಬ್ಬಂದಿಯ ರಕ್ಷಣೆಗಾಗಿ ಸುಮಾರು 3 ಸಾವಿರ ಮಂದಿ ಸೈನಿಕರನ್ನು ಹೆಚ್ಚುವರಿಯಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಪೆಂಟಗಾನ್ ಪ್ರೆಸ್​ ಸೆಕ್ರೆಟರಿ ಜಾನ್ ಕಿರ್ಬಿ ತಿಳಿಸಿದ್ದಾರೆ.

ಇದನ್ನೂ ಓದಿ:ಆಗಸ್ಟ್ 14 ಇನ್ಮುಂದೆ 'ವಿಭಜನೆಯ ಭಯಾನಕತೆಯ ನೆನಪಿನ ದಿನ': ಪ್ರಧಾನಿ ಮೋದಿ

ABOUT THE AUTHOR

...view details