ಕರ್ನಾಟಕ

karnataka

ETV Bharat / international

ನವರಾತ್ರಿ ಆರಂಭ: ಶುಭ ಕೋರಿದ ಕಮಲಾ ಹ್ಯಾರಿಸ್​​ & ಜೋ ಬಿಡೆನ್​!

ಹಿಂದೂಗಳ ಪವಿತ್ರ ಹಬ್ಬ ನವರಾತ್ರಿ ಆರಂಭಗೊಂಡಿದ್ದು, ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರಿಸ್​ ಶುಭಕೋರಿದ್ದಾರೆ.

Kamala Harris
Kamala Harris

By

Published : Oct 17, 2020, 8:38 PM IST

ವಾಷಿಂಗ್ಟನ್​​: ಇಂದಿನಿಂದ ನವರಾತ್ರಿ ಆರಂಭಗೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರಿಸ್​ ಹಬ್ಬದ ಶುಭ ಕೋರಿದ್ದಾರೆ.

ನಮ್ಮ ಹಿಂದೂ ಅಮೆರಿಕ ಸ್ನೇಹಿತರು ಮತ್ತು ಅವರ ಕುಟುಂಬಕ್ಕೆ ಹಾಗೂ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ನವರಾತ್ರಿ ಶುಭಾಶಯಗಳು. ಈ ರಜಾ ದಿನ ನಮ್ಮ ಸಮುದಾಯದ ಶ್ರಯೋಭಿವೃದ್ಧಿ ಹಾಗೂ ಉತ್ತಮ ಅಮರಿಕ ನಿರ್ಮಿಸಲು ನಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ ಎಂದು ಕಮಲಾ ಹ್ಯಾರಿಸ್​ ಟ್ವೀಟ್​ ಮಾಡಿದ್ದಾರೆ.

ಹಿಂದೂಗಳ ಪವಿತ್ರ ಹಬ್ಬ ನವರಾತ್ರಿ ಆರಂಭಗೊಳ್ಳುತ್ತಿದ್ದು, ಯುಎಸ್​​​ ಮತ್ತು ಪ್ರಪಂಚದಾದ್ಯಂತ ಆಚರಿಸುವ ಎಲ್ಲರಿಗೂ ನಮ್ಮ ಶುಭಾಶಯಗಳು. ಒಳ್ಳೆಯದು ಕೆಟ್ಟದ್ದನ್ನು ಜಯಿಸಬಹುದು ಮತ್ತು ಎಲ್ಲರಿಗೂ ಹೊಸ ಆರಂಭ ಮತ್ತು ಅವಕಾಶ ನೀಡಬಹುದು ಎಂದು ಡೆಮಾಕ್ರಟಿಕ್​​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್​​ ಶುಭಾಶಯಗಳನ್ನ ತಿಳಿಸಿದ್ದಾರೆ.

ABOUT THE AUTHOR

...view details