ಕರ್ನಾಟಕ

karnataka

ETV Bharat / international

ಇಂಡೊ-ಫೆಸಿಪಿಕ್ ಸಾಗರದಲ್ಲಿ ಚೀನಾ ಹಿಡಿತ ತಪ್ಪಿಸಲು ಒಂದಾದ 'ಕ್ವಾಡ್' - ಭಾರತ-ಅಮೆರಿಕ-ಆಸ್ಟ್ರೇಲಿಯಾ ಮತ್ತು ಜಪಾನ್ ಕ್ವಾಡ್ ಮೈತ್ರಿಕೂಟ

ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶ, ಕೋವಿಡ್​ -19 ನಿಯಂತ್ರಣ, ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನ, ಕಡಲ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಯಂತಹ ವಿಚಾರಗಳ ಕುರಿತು ಕ್ವಾಡ್ ಶೃಂಗಸಭೆಯಲ್ಲಿ ಚರ್ಚಿಸಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಒಟ್ಟಾಗಿ ಕೆಲಸ ಮಾಡುವುದಾಗಿ ಕ್ವಾಡ್​ ದೇಶಗಳು ಪ್ರತಿಜ್ಞೆ ಮಾಡಿವೆ.

ಕ್ವಾಡ್
ಕ್ವಾಡ್

By

Published : Mar 14, 2021, 10:08 AM IST

ವಾಷಿಂಗ್ಟನ್: ಇಂಡೊ-ಫೆಸಿಪಿಕ್ ಪ್ರದೇಶದಲ್ಲಿ ಚೀನಾ ಹೆಚ್ಚು ಹಿಡಿತ ಸಾಧಿಸಲು ಬೆದರಿಕೆಯೊಡ್ಡುತ್ತಿರುವುದರಿಂದ ರಕ್ಷಣಾ ದೃಷ್ಟಿಯಿಂದ ಕ್ವಾಡ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿವೆ.

ಹಿಂದೂ ಮಹಾಸಾಗರ-ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಮುಕ್ತ ಸಮುದ್ರಯಾನವನ್ನು ರಕ್ಷಿಸುವ ಉದ್ದೇಶದಿಂದ ಭಾರತ-ಅಮೆರಿಕ-ಆಸ್ಟ್ರೇಲಿಯಾ ಮತ್ತು ಜಪಾನ್ ಕ್ವಾಡ್ ಮೈತ್ರಿಕೂಟ ರಚಿಸಿಕೊಂಡಿದ್ದು, ಪ್ರಥಮ ಕ್ವಾಡ್​ (ಕ್ವಾಡ್ರಿಲ್ಯಾಟರಲ್​ ಏಷ್ಯನ್​ ಆರ್ಚ್​ ಆಫ್​ ಡೆಮಾಕ್ರಸಿ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದ್ದ ಸೂಗಾ ಅವರು ವರ್ಚುಯಲ್ ಮೂಲಕ ಮಾತುಕತೆ ನಡೆಸಿದ್ದಾರೆ.

ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶ, ಕೋವಿಡ್​ -19 ನಿಯಂತ್ರಣ, ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನ, ಕಡಲ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಯಂತಹ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಇಂಡೋ-ಪೆಸಿಫಿಕ್ ವಲಯದ ಹವಾಮಾನ ವೈಪರಿತ್ಯ, ಭದ್ರತೆಯಲ್ಲಿ ಎದುರಾಗಿರುವ ಸವಾಲು ಹಾಗೂ ತಂತ್ರಜ್ಞಾನ ಬಳಸಿಕೊಂಡು ಪರಿಹಾರ ಹುಡುಕಲು ಕ್ವಾಡ್ ಜಾಗತಿಕ ಶಕ್ತಿಯಾಗಲಿದೆ. ಕ್ವಾಡ್ ಮೂಲಕ ನಾವೆಲ್ಲಾ ಒಗ್ಗಟ್ಟಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡಬೇಕಿದೆ. ನಮ್ಮ ಹಂಚಿಕೆಯ ಮೌಲ್ಯಗಳನ್ನು ಹೆಚ್ಚಿಸಲು ಮತ್ತು ಸುರಕ್ಷಿತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಉತ್ತೇಜಿಸಲು ನಾವು ಹಿಂದೆಂದಿಗಿಂತಲೂ ಒಗ್ಗಟ್ಟಾಗಿ ಹೆಜ್ಜೆ ಇಡಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಇನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಸಹ ಪ್ರತಿಕ್ರಿಯೆ ನೀಡಿದ್ದು, ತುರ್ತು ಜಾಗತಿಕ ಸವಾಲುಗಳನ್ನು ನಾವು ಒಟ್ಟಾಗಿ ಎದುರಿಸುವಂತೆ ಸಂಕಲ್ಪ ಮಾಡಿಕೊಂಡಿದ್ದೇವೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಉಂಟಾಗುವ ಹವಾಮಾನದ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಕ್ವಾಡ್ ದೇಶಗಳು ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details