ವಾಷಿಂಗ್ಟನ್(ಅಮೆರಿಕ):ತನ್ನ ಮಿಲಿಟರಿ ಸಹಾಯಕನ ಕೊರೊನಾ ತಪಾಸಣಾ ವರದಿ ಪಾಸಿಟಿವ್ ಬಂದ ಹಿನ್ನೆಲೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಪ್ರತಿದಿನ ಕೋವಿಡ್-19 ಪರೀಕ್ಷೆಗೊಳಗಾಗುವುದಾಗಿ ಹೇಳಿದ್ದಾರೆ.
ಪ್ರತಿದಿನ ಕೊರೊನಾ ಪರೀಕ್ಷೆಗೊಳಗಾಗಲಿರುವ ಅಮೆರಿಕ ಅಧ್ಯಕ್ಷ ಟ್ರಂಪ್!! - ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ ಮಿಲಿಟರಿ ಸಹಾಯಕನ ಕೊರೊನಾ ತಪಾಸಣಾ ವರದಿ ಪಾಸಿಟಿವ್ ಬಂದ ಹಿನ್ನೆಲೆ ಅವರು ಪ್ರತಿದಿನ ಕೋವಿಡ್-19 ಪರೀಕ್ಷೆಗೆ ಒಳಗಾಗುವುದಾಗಿ ಹೇಳಿದ್ದಾರೆ.

ತನ್ನ ಮಿಲಿಟರಿ ಸಹಾಯಕ ಕೊರೊನಾ ಪಾಸಿಟಿವ್ ಆಗಿರುವ ಕುರಿತು ಟ್ರಂಪ್ ಮಾತನಾಡಿ, "ಆತ ನನ್ನ ಮಿಲಿಟರಿ ಸಹಾಯಕನೇ ಆಗಿದ್ದರೂ ನಾನು ಅವರೊಂದಿಗೆ ಹೆಚ್ಚು ಸಂಪರ್ಕವನ್ನು ಹೊಂದಿರಲಿಲ್ಲ. ಅವರ ಬಗ್ಗೆ ನನಗೆ ತಿಳಿದಿದೆ. ಒಳ್ಳೆಯ ವ್ಯಕ್ತಿ ಎಂದರು. ಇದೇ ವೇಳೆ, ನನ್ನ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೊಂದಿಗೂ ಆ ವ್ಯಕ್ತಿ ಬಹಳ ಕಡಿಮೆ ಸಂಪರ್ಕವನ್ನು ಹೊಂದಿದ್ದರು. ಆದರೆ, ನಮ್ಮಿಬ್ಬರನ್ನೂ ಪರೀಕ್ಷಿಸಲಾಗಿದ್ದು, ನಮ್ಮಿಬ್ಬರ ವರದಿಯೂ ನೆಗೆಟಿವ್ ಬಂದಿದೆ"ಎಂದು ಟ್ರಂಪ್ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂದುವರೆದು ಮಾತನಾಡಿದ ಟ್ರಂಪ್, ಮೊದಲಿಗೆ ವಾರಕ್ಕೊಮ್ಮೆ ಕೊರೊನಾ ಪರೀಕ್ಷೆಗೆ ತಾನು ಒಳಗಾಗುತ್ತಿದ್ದಾಗಿ ಇನ್ಮುಂದೆ ಪ್ರತೀದಿನ ಪರೀಕ್ಷೆಗೊಳಗಾಗುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಶ್ವೇತಭವನದ ಉಪಾಧ್ಯಕ್ಷ ಮತ್ತು ಇತರ ಸಿಬ್ಬಂದಿಯನ್ನೂ ಪ್ರತಿದಿನ ಕೊರೊನಾ ವೈರಸ್ ಪರೀಕ್ಷೆಗೊಳಪಡಿಸಲಾಗುವುದು ಎಂದರು.