ನ್ಯೂಯಾರ್ಕ್: ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟ ವಸ್ತುಗಳ ಬಳಕೆಯಿಂದ ಸುಮಾರು 1 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅಧ್ಯಯನದ ವರದಿಯೊಂದು ಬಹಿರಂಗಪಡಿಸಿದೆ.
ನ್ಯೂಯಾರ್ಕ್ ವಿಶ್ವವಿದ್ಯಾಲಯದ ಗ್ರಾಸ್ಮನ್ ಸ್ಕೂಲ್ ಆಫ್ ಮೆಡಿಸಿನ್ ಸುಮಾರು 55 ರಿಂದ 64 ವಯೋಮಾನದ 5,000 ವಯಸ್ಕರನ್ನು ಈ ಅಧ್ಯಯನಕ್ಕೆ ತೆಗೆದುಕೊಂಡಿತ್ತು. ಇದೀಗ ಸಂಶೋಧನೆಯಿಂದ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಮೂತ್ರದಲ್ಲಿ ಥಾಲೇಟ್ಸ್ ಅಧಿಕ ಸಾಂದ್ರತೆ ಹೊಂದಿರುವವರು ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.
ದೈನಂದಿನ ದಿನಚರಿಯಲ್ಲಿ ಪ್ಲಾಸ್ಟಿಕ್ ಬಳಕೆ ವಿಪರೀತವಾಗುತ್ತಿದೆ. ಸ್ನಾನ ಮಾಡಲು ಬಳಸುವ ಶಾಂಪೂ ಹಾಗೂ ಮುಖದ ಸೌಂದರ್ಯ ಹೆಚ್ಚಿಸಲು ಮೇಕಪ್ಗಳಿಗೆ ಬಳಸುವ ರಾಸಾಯನಿಕ ಥಾಲೇಟ್ಸ್ಗಳು ಮಾನವರ ದೇಹದ ಮೇಲೆ ಪರಿಣಾಮ ಬೀರುತ್ತಿವೆ. ಹಾರ್ಮೋನಿಗೆ ತೊಂದರೆ ನೀಡುತ್ತಿವೆ.