ಜಿನೀವಾ: ಕೊರೊನಾ 2ನೇ ಅಲೆ ಯಾವಾಗ ಅಪ್ಪಳಿಸಬಹುದು ಎಂಬುದರತ್ತ ಗಮನಹರಿಸುವ ಬದಲು, ಸಾಂಕ್ರಾಮಿಕ ರೋಗದ ಪ್ರಸ್ತುತ ಅಲೆಯಲ್ಲಿ ಉತ್ತುಂಗಕ್ಕೇರಿರುವಾಗ ಈಗ ಮತ್ತಷ್ಟು ಚುರುಕಾಗಿ ಹೋರಾಟ ಮಾಡಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಕೊರೊನಾದ 2ನೇ ಅಲೆಯ ಚಿಂತೆ ಬಿಟ್ಟು, ಮೊದಲನೇ ಅಲೆಯತ್ತ ಗಮನಹರಿಸಿ: WHO - ಕೊರೊನಾ ವೈರಸ್ 2ನೇ ಅಲೆ
ಜನರಿಗೆ ಮೊದಲ ಅಲೆಯ ವಿರುದ್ಧ ಹೋರಾಡುವ ಪಾಠಗಳನ್ನು ಕಲಿಯಲು ಸಾಧ್ಯವಾದರೆ, ಎರಡನೇ ಅಲೆಯ ವಿರುದ್ಧ ಉತ್ತಮವಾಗಿ ಸೆಣಸಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ಮುಖ್ಯಸ್ಥ ಡಾ. ಮೈಕೆಲ್ ರಯಾನ್ ಹೇಳಿದರು.
ಕೊರೊನಾ
ಜನರಿಗೆ ಮೊದಲ ಅಲೆಯ ವಿರುದ್ಧ ಹೋರಾಡುವ ಪಾಠಗಳನ್ನು ಕಲಿಯಲು ಸಾಧ್ಯವಾದರೆ, ಎರಡನೇ ಅಲೆಯ ವಿರುದ್ಧ ಉತ್ತಮವಾಗಿ ಸೆಣಸಾಡಬಹುದು ಎಂದು ಡಾ. ಮೈಕೆಲ್ ರಯಾನ್ ಹೇಳಿದರು.
ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಬೇಕಿದೆ. ಜೊತೆಗೆ ವೈರಸ್ ವಿರುದ್ಧ ಹೋರಾಡುವ ಪ್ರಮುಖ ತಂತ್ರವಾದ ಸಂಪರ್ಕಿತರ ಟ್ರ್ಯಾಕಿಂಗ್ ಅನ್ನು ಆರೋಗ್ಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಮಾಡಬೇಕಿದೆ ಎಂದರು.