ವಾಷಿಂಗ್ಟನ್:ಬಿಳಿಯರ ಪ್ರಾಬಲ್ಯ ದೇಶೀಯ ಭಯೋತ್ಪಾದನೆಯಾಗಿದ್ದು, ಅದರ ವಿರುದ್ಧ ಅಮೆರಿಕ ಜಾಗರೂಕವಾಗಿರಬೇಕು ಎಂದು ಯುಎಸ್ ಕಾಂಗ್ರೆಸ್ನಲ್ಲಿ ಮಾಡಿದ ಮೊದಲ ಜಂಟಿ ಭಾಷಣದಲ್ಲೇ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಜಾಗತಿಕ ಭಯೋತ್ಪಾದಕ ಜಾಲಗಳು ದೇಶದ ಎಲ್ಲೆಗಳನ್ನು ಮೀರಿ ಬೆಳೆದಿವೆ. ಬಿಳಿಯ ಪ್ರಾಬಲ್ಯವಾದಿಗಳು ವಿದೇಶಿ ಭಯೋತ್ಪಾದಕರಿಂದ ದೊಡ್ಡ ಮಟ್ಟದಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಳ್ಳುವ ತನ್ನ ನಿರ್ಧಾರದ ಕುರಿತು ಚರ್ಚಿಸುವಾಗ ಅವರು ಅಭಿಪ್ರಾಯಪಟ್ಟರು.
ಇದನ್ನೂಓದಿ: ಹವಾಮಾನ ಬಿಕ್ಕಟ್ಟು ಅಮೆರಿಕದ್ದಷ್ಟೇ ಅಲ್ಲ, ಜಾಗತಿಕ ಹೋರಾಟ: ಜೋ ಬೈಡನ್
ನಮ್ಮ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕ ಬೆದರಿಕೆಗಳ ಕುರಿತು ನೀಡುವ ಮಾಹಿತಿಯನ್ನು ನಾವು ನಿರ್ಲಕ್ಷಿಸುವುದಿಲ್ಲ. ಬಿಳಿಯರ ಪ್ರಾಬಲ್ಯ ಆಂತರಿಕ ಭಯೋತ್ಪಾದನೆಯಾಗಿದೆ. ನಾವು ಒಟ್ಟಾಗಿ ನಮ್ಮ ದೇಶದ ಆತ್ಮವನ್ನು ಕಾಪಾಡಬೇಕು ಎಂದು ಎಂದು ಬೈಡನ್ ಹೌಸ್ ಚೇಂಬರ್‌ನಲ್ಲಿ ಹೇಳಿದರು.
ಕೇವಲ ಮೂರು ತಿಂಗಳ ಹಿಂದೆಯಷ್ಟೇ ಚುನಾವಣಾ ಫಲಿತಾಂಶವನ್ನು ವಿರೋಧಿಸಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಬೈಡನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.