ವಾಷಿಂಗ್ಟನ್:ಅಮೆರಿಕದ ಶ್ವೇತ ಭವನದ ಸುತ್ತಮುತ್ತ ಜಾರಿಗೊಳಿಸಿದ್ದ ನಿಷೇಧವನ್ನ ತೀವ್ರ ತಪಾಸಣೆ ಬಳಿಕ ತೆರವುಗೊಳಿಸಲಾಗಿದೆ.ಶ್ವೇತ ಭವನದ ನಿರ್ಬಂಧಿತ ಪ್ರದೇಶಕ್ಕೆ ವಿಮಾನವೊಂದು ಬಂದಿಳಿದ ಹಿನ್ನೆಲೆ ಇದು ಯಾವುದೋ ಶತ್ರುವಿನ ವಿಮಾನ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿತ್ತು. ನಿನ್ನೆ ಈ ವಿಮಾನದಿಂದ ಯಾವುದೇ ತೊಂದರೆ ಇಲ್ಲ ಎಂದು ವರದಿ ಬಂದಿದ್ದರಿಂದ ಪೊಲೀಸರು ಲಾಕ್ಡೌನ್ ತೆರವುಗೊಳಿಸಿದ್ದಾರೆ.
ಈ ಘಟನೆಯು ವಾಷಿಂಗ್ಟನ್‌ನಲ್ಲಿ ಸಾಕಷ್ಟು ಭೀತಿಯನ್ನುಂಟು ಮಾಡಿತ್ತು. ಹಾಗಾಗಿ ಯುಎಸ್ ಕ್ಯಾಪಿಟಲ್ನನ್ನು ಸ್ಥಳಾಂತರಿಸಲಾಗಿತ್ತು. ಅಲ್ಲದೇ ಶ್ವೇತಭವನದ ಸುತ್ತಮುತ್ತಲಿನ ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಗಿತ್ತು.