ವಾಷಿಂಗ್ಟನ್:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಮೂಲಕ ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸುವಂತೆ ರಷ್ಯನ್ನರಿಗೆ ಕರೆ ನೀಡುವ ಮೂಲಕ ದಕ್ಷಿಣ ಕೆರೊಲಿನಾ ಸೆನೆಟರ್ ಲಿಂಡ್ಸೆ ಗ್ರಹಾಂ ವಿವಾದ ಸೃಷ್ಟಿಸಿದ್ದಾರೆ. ಲಿಂಡ್ಸೆ ಗ್ರಹಾಂ ಹೇಳಿಕೆ ಬಗ್ಗೆ ಅಮೆರಿಕ ಸರ್ಕಾರ ಸ್ಪಷ್ಟನೆ ನೀಡಿದ್ದು, ಇದು ಸರ್ಕಾರದ ನಿಲುವಲ್ಲ ಎಂದು ವೈಟ್‌ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ.
ವಾಯುಪಡೆಯ ಮಾಜಿ ವಕೀಲರೂ ಆಗಿರುವ ಗ್ರಹಾಂ ಗುರುವಾರ ಸಂಜೆ ಟ್ವೀಟ್ ಮಾಡಿ, ಯುದ್ಧವನ್ನು ಕೊನೆಗೊಳಿಸುವ ಏಕೈಕ ಮಾರ್ಗವೆಂದರೆ ರಷ್ಯಾದಲ್ಲಿ ಯಾರಾದರೂ ಈ ವ್ಯಕ್ತಿಯನ್ನು ಹೊರಗೆ ಕರೆದೊಯ್ಯುವುದು. ಇದರಿಂದ ನೀವು ನಿಮ್ಮ ದೇಶ ಮತ್ತು ಜಗತ್ತಿಗೆ ಉತ್ತಮ ಸೇವೆ ಮಾಡಿದಂತೆ ಎಂದು ಬರೆದಿದ್ದರು.