ಕರ್ನಾಟಕ

karnataka

By

Published : Feb 2, 2021, 7:19 AM IST

ETV Bharat / international

ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆ ವಿರೂಪ: ಘಟನೆ ಖಂಡಿಸಿದ ಶ್ವೇತಭವನ

ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿ ಅಪವಿತ್ರಗೊಳಿಸಿದ್ದರು.

White House
ಜೆನ್ ಸಾಕಿ

ವಾಷಿಂಗ್ಟನ್(ಯುಎಸ್): ಕ್ಯಾಲಿಫೋರ್ನಿಯಾದ ಡೇವಿಸ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ ಕೃತ್ಯವನ್ನು ಶ್ವೇತಭವನ ಖಂಡಿಸಿದೆ.

ಗಾಂಧಿಯವರ ಸ್ಮಾರಕವನ್ನು ಅಪವಿತ್ರಗೊಳಿಸಿದ ಘಟನೆ ಬಗ್ಗೆ ನಮಗೆ ಖಂಡಿತವಾಗಿಯೂ ಕಾಳಜಿ ಇದೆ. ಕೃತ್ಯವನ್ನು ನಾವು ಖಂಡಿಸುತ್ತೇವೆ ಹಾಗೂ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ ಎಂದು ಶ್ವೇತಭವನದಲ್ಲಿ ನಡೆದ ಸಮಾವೇಶದಲ್ಲಿ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.

ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿರುವ ಪ್ರತಿಮೆಯ ಪಾದ, ತಲೆಯ ಭಾಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮುರಿದುಹೋಗಿತ್ತು.

ಈ ಪ್ರಕರಣವನ್ನು ವಿರೋಧಿಸಿ, ಭಾರತೀಯ ಅಮೆರಿಕನ್ನರು ಧರಣಿ ನಡೆಸಿ ಪ್ರತಿಮೆಯನ್ನು ಪುನಃ ಸ್ಥಾಪಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ:ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆ ವಿರೂಪ: ಭಾರತದ ಖಂಡನೆ

6 ಅಡಿ, 3,650-ಪೌಂಡ್ ಕಂಚಿನ ಗಾಂಧಿ ಪ್ರತಿಮೆಯು 2016 ರಿಂದ ಈ ಉದ್ಯಾನವನದಲ್ಲಿದೆ. ಇದು ಭಾರತ ಸರ್ಕಾರ ಅಮೆರಿಕಕ್ಕೆ ನೀಡಿದ ಉಡುಗೊರೆಯಾಗಿತ್ತು.

For All Latest Updates

ABOUT THE AUTHOR

...view details