ನವದೆಹಲಿ:ಕಳೆದ ಕೆಲ ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ, ಕಚೇರಿಯ ಟ್ವಿಟರ್ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಟ್ವಿಟರ್ ಖಾತೆ ಫಾಲೋ ಮಾಡುತ್ತಿದ್ದ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಇದೀಗ ದಿಢೀರ್ ಆಗಿ ಅನ್ಫಾಲೋ ಮಾಡಿದೆ.
ಫೆಬ್ರವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ, ವೈಟ್ ಹೌಸ್ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಟ್ವಿಟರ್ ಖಾತೆ ಫಾಲೋ ಮಾಡಲು ಶುರು ಮಾಡಿತ್ತು. ಜತೆಗೆ ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಹಾಗೂ ಯುಎಸ್ನಲ್ಲಿರುವ ಭಾರತ ರಾಯಭಾರಿ ಕಚೇರಿ ಕೂಡ ಫಾಲೋ ಮಾಡುತ್ತಿದ್ದವು. ಆದರೆ, ಇದೀಗ ಅನ್ಫಾಲೋ ಮಾಡಿವೆ.
ಪಿಎಂ ಮೋದಿ ಫಾಲೋ ಮಾಡ್ತಿರುವ ವೈಟ್ಹೌಸ್... ಈ ಗೌರವಕ್ಕೆ ಪಾತ್ರರಾದ ವಿಶ್ವದ ಮೊದಲ ನಾಯಕ!