ಕರ್ನಾಟಕ

karnataka

ETV Bharat / international

ಕೊರೊನಾ ಪರಿಹಾರ ಕುರಿತು ಶ್ವೇತಭವನದ ಶಾಸಕರೊಂದಿಗೆ ಮಾತುಕತೆ ನಡೆಸಿದ ಬೈಡನ್‌ ಉನ್ನತ ಸಹಾಯಕರು

ಬೈಡೆನ್ ತಮ್ಮ ಅಧ್ಯಕ್ಷತೆಯ ಆರಂಭಿಕ ದಿನಗಳಲ್ಲಿ ಉಭಯಪಕ್ಷೀಯ ಬೆಂಬಲ ಗಳಿಸುವ ಪ್ರಯತ್ನದಲ್ಲಿದ್ದು, ಈ ಹಿನ್ನೆಲೆ ಪ್ರತಿಪಕ್ಷದ ನಾಯಕರ ಜೊತೆ ಕೊರೊನಾವೈರಸ್ ಪರಿಹಾರ ಪ್ಯಾಕೇಜ್ ಕುರಿತು ಮಾತುಕತೆ ನಡೆಸಿದರು.

ಶ್ವೇತಭವನದ ಶಾಸಕರೊಂದಿಗೆ ಮಾತುಕತೆ
ಶ್ವೇತಭವನದ ಶಾಸಕರೊಂದಿಗೆ ಮಾತುಕತೆ

By

Published : Jan 25, 2021, 1:25 PM IST

ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷ ಜೋ ಬೈಡನ್‌ರ ಉನ್ನತ ಸಹಾಯಕರು ಭಾನುವಾರ ಮಧ್ಯಮ ಸೆನೆಟ್ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್‌ಗಳ ಗುಂಪಿನೊಂದಿಗೆ $​​ 1.9 ಟ್ರಿಲಿಯನ್ ಕೊರೊನಾವೈರಸ್ ಪರಿಹಾರ ಪ್ಯಾಕೇಜ್ ಕುರಿತು ಮಾತುಕತೆ ನಡೆಸಿದರು.

ಬೈಡೆನ್ ತಮ್ಮ ಅಧ್ಯಕ್ಷತೆಯ ಆರಂಭಿಕ ದಿನಗಳಲ್ಲಿ ಉಭಯಪಕ್ಷೀಯ ಬೆಂಬಲವನ್ನು ಗಳಿಸುವ ಪ್ರಯತ್ನದಲ್ಲಿದ್ದು, ಈ ಹಿನ್ನೆಲೆ ಪ್ರತಿಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಲಾಗಿದೆ.

ಸಾಂಕ್ರಾಮಿಕ ರೋಗವು ಪ್ರತಿದಿನ ಸಾವಿರಾರು ಅಮೆರಿಕರನ್ನು ಕೊಲ್ಲುತ್ತಿದ್ದು, ಕಟ್ಟುನಿಟ್ಟಿನ ನಿರ್ಬಂಧಗಳಿಂದ ಹೆಚ್ಚಿನ ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಬ್ರಿಯಾನ್ ಡೀಸ್ ಮತ್ತು ಇತರ ಹಿರಿಯ ಶ್ವೇತಭವನದ ಅಧಿಕಾರಿಗಳೊಂದಿಗೆ ಕನಿಷ್ಠ ಒಂದು ಡಜನ್ ಸೆನೆಟರ್‌ಗಳು ಒಂದು ಗಂಟೆ 15 ನಿಮಿಷಗಳ ಕಾಲ ವರ್ಚುಯಲ್ ಕರೆಯಲ್ಲಿ ಭೇಟಿಯಾದರು.

ಓದಿ:ಕಮ್ಯುನಿಸ್ಟ್ ಪಕ್ಷದ ಎರಡೂ ಬಣಗಳನ್ನು ಗುರುತಿಸಲು ನಿರಾಕರಿಸಿದ ನೇಪಾಳ ಚುನಾವಣಾ ಆಯೋಗ

ವ್ಯಾಕ್ಸಿನೇಷನ್ ವಿತರಣೆಯನ್ನು ವೇಗಗೊಳಿಸುವುದು ಮತ್ತು ಕೊರೊನಾ ಪರೀಕ್ಷೆ ಹಾಗೂ ಪತ್ತೆಹಚ್ಚುವಿಕೆಯನ್ನು ವಿಸ್ತರಿಸುವುದು ಮೊದಲ ಆದ್ಯತೆಯಾಗಿದೆ ಎಂದು ಕಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.

ಶ್ವೇತಭವನವು $ 1.9 ಟ್ರಿಲಿಯನ್ ಅಂಕಿಗಳನ್ನು ಹೇಗೆ ತಲುಪಿತು ಎಂಬುದರ ಕುರಿತು ಹೆಚ್ಚಿನ ಡೇಟಾವನ್ನು ಸೆನೆಟರ್‌ಗಳು ಬಯಸಿದ್ದರು. ಅನೇಕ ಸೆನೆಟರ್‌ಗಳು ಉಭಯಪಕ್ಷೀಯ ಗುಂಪಿನಿಂದ ಬಂದವರಾಗಿದ್ದಾರೆ.

ಬೈಡನ್​ ಮತ್ತು ಅವರ ಸಹಾಯಕರು ತಮ್ಮ ಸಾರ್ವಜನಿಕ ಕಾಮೆಂಟ್‌ಗಳಲ್ಲಿ ಈ ಯೋಜನೆಯೂ ಒಂದು ಆರಂಭಿಕ ಹಂತವಾಗಿದೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ರಾಜ್ಯಗಳ ಮೇಲೆ ಸಾಂಕ್ರಾಮಿಕ ರೋಗವು ಬೀರುತ್ತಿರುವ ವಿನಾಶಕಾರಿ ಪರಿಣಾಮವನ್ನು ಪರಿಗಣಿಸಿ ಪರಿಹಾರದ ಬಗ್ಗೆ ಸಾಮಾನ್ಯ ನೆಲೆಯನ್ನು ಕಂಡು ಹಿಡಿಯುವುದು ಸಾಧ್ಯ ಎಂದು ಒತ್ತಿ ಹೇಳಿದ್ದಾರೆ.

ABOUT THE AUTHOR

...view details