ಕರ್ನಾಟಕ

karnataka

By

Published : Nov 25, 2020, 12:45 PM IST

ETV Bharat / international

ದೈನಂದಿನ ಸುದ್ದಿಗೋಷ್ಠಿ ನಡೆಸಲು ಬೈಡನ್​​​ಗೆ ಔಪಚಾರಿಕ ಒಪ್ಪಿಗೆ

ಶ್ವೇತ ಭವನದಿಂದ ಬೈಡನ್ ಮೊದಲ ಸುದ್ದಿಗೋಷ್ಠಿ ನಡೆಸಲು ತಾರ್ಕಿಕ ಅನುಮೋದನೆ ದೊರೆತಿದೆ. ದೈನಂದಿನ ಸುದ್ದಿಗೋಷ್ಠಿ ನಡೆಸಲು ಔಪಚಾರಿಕವಾಗಿ ಒಪ್ಪಿಗೆ ನೀಡಲಾಗಿದ್ದು, ಈ ಹಂತದ ಕಾರ್ಯಗಳು ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Newly elected President Joe Biden
ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್: ಅಮೆರಿಕದಲ್ಲಿ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅಧಿಕಾರ ವಹಿಸಿಕೊಳ್ಳುವ ದಿನ ಹತ್ತಿರವಾಗುತ್ತಿದೆ. ಈ ಹಿನ್ನೆಲೆ ಶ್ವೇತಭವನವು ಅಧ್ಯಕ್ಷರ ದೈನಂದಿನ ಸುದ್ದಿಗೋಷ್ಠಿ ನಡೆಸಲು ಔಪಚಾರಿ ಒಪ್ಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿ ಮಾಧ್ಯಮದ ಪ್ರಕಾರ, ಬೈಡನ್ ತಮ್ಮ ಮೊದಲ ಸುದ್ದಿಗೋಷ್ಠಿ ನಡೆಸುವುದರ ಕುರಿತಂತೆ ಸಮನ್ವಯ ಚರ್ಚೆಯಾಗುತ್ತಿದೆ. ಆದರೆ, ಟ್ರಂಪ್ ಸೋಲೊಪ್ಪಿದ ನಂತರ ಅಧಿಕಾರ ಪಡೆಯುವ ಹಂತದ ಮುಂದಿನ ಹೆಜ್ಜೆ ಇದಾಗಿರಲಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭದ್ರತಾ ತಂಡ ಸಂಗ್ರಹಿಸಿರುವ ಹಾಗೂ ಬೆಳವಣಿಗೆಗಳ ಕುರಿತಂತೆ ದೈನಂದಿನ ಸುದ್ದಿಗೋಷ್ಠಿಯು ಔಪಚಾರಿಕವಾಗಿ ಮುಂದುವರಿಯಲಿದೆ ಎಂದು ಜನರಲ್​ ಸರ್ವಿಸ್ ಅಡ್ಮಿನಿಸ್ಟ್ರೇಷನ್ ಸೂಚನೆ ನೀಡಿತ್ತು. ಈ ಹಿನ್ನೆಲೆ ಮುಂದಿನ ಸುದ್ದಿಗೋಷ್ಠಿಯಲ್ಲಿ ಬೈಡನ್ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಅಧಿಕಾರದಲ್ಲಿರುವ ಕಮಾಂಡರ್ ಇನ್​ ಚೀಫ್ ರಾಷ್ಟ್ರೀಯ ಭದ್ರತೆಯ ಕುರಿತಂತೆ​ ತ್ವರಿತ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬಹುದು ಹೀಗಾಗಿ ಯಾವ ಸಮಯದಲ್ಲೂ ಸುದ್ದಿಗೋಷ್ಠಿ ನಡೆಸುವ ಸಂದರ್ಭ ಬರಬಹುದಾಗಿದೆ.

ಈ ಮೊದಲ ಟ್ರಂಪ್ ಆಡಳಿತವು ಔಪಚಾರಿಕ ಸುದ್ದಿಗೋಷ್ಠಿಗಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದೆ ಎಂದು ಜಿಎಸ್​​ಎ ಆಡಳಿತಾಧಿಕಾರಿ ಎಮಿಲಿ ಮರ್ಫಿ ಬೈಡನ್​ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾರ್ಫಿ ಪ್ರತಿಕ್ರಿಯಿಸಿದ್ದು, ನನಗೆ ಶ್ವೇತ ಭವನದಿಂದ ಯಾವುದೇ ಒತ್ತಡವಿಲ್ಲ. ಔಪಚಾರಿಕ ಬದಲಾವಣೆ ತರುವಲ್ಲಿ ತಡವಾಗಿ ನಿರ್ಧಾರ ಕೈಗೊಳ್ಳುವಂತೆ ಯಾವುದೇ ಒತ್ತಡವಿಲ್ಲ. ನಾನು ಕಾನೂನು ಮತ್ತು ಸತ್ಯಕ್ಕೆ ಅನುಗುಣವಾಗಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

ABOUT THE AUTHOR

...view details