ಕರ್ನಾಟಕ

karnataka

ETV Bharat / international

ಏಷ್ಯನ್ ವಿರೋಧಿ ಹಿಂಸಾಚಾರಕ್ಕೆ ತಡೆ: ಸಮನ್ವಯತೆ ಸಾಧಿಸಲು ಹೊಸ ಕ್ರಮ ಕೈಗೊಂಡ ಬೈಡನ್​ ಸರ್ಕಾರ - ಏಷ್ಯನ್ ಅಮೆರಿಕನ್ನರ ಸಮಸ್ಯೆ ನಿವಾರಿಸಲು ಬೈಡನ್​ ಹೊಸ ಕ್ರಮ

ಅಮೆರಿಕದಲ್ಲಿ ಏಷ್ಯನ್ ಅಮೆರಿಕನ್ನರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದು, ಇದನ್ನು ತಡೆಗಟ್ಟಿ ಪರಸ್ಪರ ಸಮನ್ವಯತೆ ಸಾಧಿಸುಲು ಬೈಡನ್ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶಾಶ್ವತ ನಿರ್ದೇಶಕರ ಸಮಿತಿಯನ್ನೂ ಸಹ ನೇಮಕ ಮಾಡಲಾಗಿದೆ.

ಜೋ ಬೈಡನ್
Joe Biden

By

Published : Mar 31, 2021, 9:15 AM IST

Updated : Mar 31, 2021, 9:28 AM IST

ವಾಷಿಂಗ್ಟನ್:ಏಷ್ಯನ್ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪ ವಾಸಿಗಳ (ಎಎಪಿಐ) ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಮತ್ತು ತಾರತಮ್ಯ ತಡೆಯಲು ಜೋ ಬೈಡನ್​ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಅಮೆರಿಕದಲ್ಲಿ ಏಷ್ಯನ್ ಅಮೆರಿಕನ್ನರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದು, ಇದನ್ನು ತಡೆಗಟ್ಟಿ ಪರಸ್ಪರ ಸಮನ್ವಯತೆ ಸಾಧಿಸುಲು ಬೈಡನ್ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶಾಶ್ವತ ನಿರ್ದೇಶಕರ ಸಮಿತಿಯನ್ನು ನೇಮಿಸಿದೆ. ಇದರಲ್ಲಿರುವ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗವು ಏಷ್ಯನ್ ಅಮೆರಿಕನ್​, ಸ್ಥಳೀಯ ಹವಾಯಿ ಮತ್ತು ಪೆಸಿಫಿಕ್ ದ್ವೀಪ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಕೆಲಸ ಮಾಡುತ್ತದೆ.

ಎಎಪಿಐ ಸಮುದಾಯದ ವಿರುದ್ಧ ನಡೆಯುವ ಅಪರಾಧಗಳನ್ನು ದಾಖಲಿಸುವ, ಏಷ್ಯನ್ ವಿರೋಧಿ ಪಕ್ಷಪಾತ ಗುರುತಿಸುವ ಮತ್ತು ವರದಿ ಮಾಡುವ ಬಗ್ಗೆ ಏಜೆಂಟರಿಗೆ ಶಿಕ್ಷಣ ನೀಡಲು ತರಬೇತಿ ಕಾರ್ಯಕ್ರಮಗಳನ್ನು ಫೆಡರಲ್​​​ ಬ್ಯೂರೋ ಆಫ್​ ಇನ್ವೆಸ್ಟಿಗೇಷನ್​(FBI) ಮಾಡಲಿದೆ.

ಓದಿ: ಭಾರತದಿಂದ 84 ದೇಶಗಳಿಗೆ 64 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ರವಾನೆ: ಡಾ.ಹರ್ಷವರ್ಧನ್​

ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದಿಂದ ಬದುಕುಳಿದಿರುವ ಎಎಪಿಐ ಸಮುದಾಯದ ಜನರಿಗೆ ಸಹಾಯ ಮಾಡಲು ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಅಮೆರಿಕನ್ ಪಾರುಗಾಣಿಕಾ ಯೋಜನೆಯಿಂದ ಸುಮಾರು 50 ಮಿಲಿಯನ್ ಹಣ ಒದಗಿಸುತ್ತಿದೆ.

ಕೋವಿಡ್ ಹೆಲ್ತ್ ಇಕ್ವಿಟಿ ಟಾಸ್ಕ್ ಫೋರ್ಸ್ ಅನ್ನು ಜನವರಿಯಲ್ಲಿ ಸ್ಥಾಪಿಸಲಾಗಿದ್ದು, ಇದರಡಿ ಆರೋಗ್ಯ ಅಸಮಾನತೆ ಮತ್ತು ಜೋನೋಫೋಬಿಯಾದ ರಚನಾತ್ಮಕ ಚಾಲಕರ ಕುರಿತು ಉಪಸಮಿತಿ ಸಹ ಸ್ಥಾಪಿಸಿದೆ. ಈ ಉಪಸಮಿತಿಯು ಕೊರೊನಾ ಸಮಯದಲ್ಲಿ ಏಷ್ಯನ್ ವಿರೋಧಿ ಪಕ್ಷಪಾತವನ್ನು ಎದುರಿಸಲು ನಿರ್ದಿಷ್ಟವಾಗಿ ಗಮನ ಹರಿಸಲಿದೆ.

Last Updated : Mar 31, 2021, 9:28 AM IST

ABOUT THE AUTHOR

...view details