ಕರ್ನಾಟಕ

karnataka

ETV Bharat / international

ರಾತ್ರಿ ಅಪರಿಚಿತ ಮಹಿಳೆ ಕಾರು ಕೈಕೊಡ್ತು.. 8 ಕಿ.ಮೀ ತಳ್ಳಿ ಸೇಫಾಗಿ ಮನೆಗೆ ಬಿಟ್ಟ ಹುಡುಗರು! - high way

ಮಧ್ಯರಾತ್ರಿ ಮಹಿಳೆಯೊಬ್ಬಳ ಕಾರು ಕೆಟ್ಟು ನಿಂತಾಗ, ಯುವಕರು ಆಕೆಯ ನೆರವಿಗೆ ಧಾವಿಸಿ ಕಾರನ್ನು ತಳ್ಳಿಕೊಂಡೇ ಗುರಿ ತಲುಪಿಸಿದ್ದಾರೆ.

car

By

Published : Jul 21, 2019, 3:07 PM IST

ಕೆನಡಾ, (ಅಮೆರಿಕಾ): ಮಧ್ಯರಾತ್ರಿ. ಒಂಟಿ ಮಹಿಳೆ. ಕೆಲವೇ ವಾರಗಳ ಹಿಂದೆ ಕೊಂಡ ಹೊಸ ಕಾರು ಕೈಕೊಟ್ಟು ಕೆಟ್ಟು ನಿಂತಿದೆ. ಏನು ಮಾಡಬೇಕು ಎಂದು ತೋಚದೆ ಮಹಿಳೆ ಆತಂಕದಲ್ಲಿದ್ದಳು. ಆಗ ಆಕೆಗೆ ಸಹಾಯಕ್ಕೆ ಬಂದವರು ಮೂವರು ಹುಡುಗರು.

ಅಮರಿಕಾದ ಕೆನಡಾ ಸಿಟಿಯಲ್ಲಿ ಈ ಘಟನೆ ನಡೆದಿದೆ. ಏರಾನ್ ಮೆಕ್​ಕ್ವಿಲಿಕ್(18), ಬೈಲಿ ಕ್ಯಾಂಪ್ಬೆಲ್(17) ಹಾಗೂ ಬಿಲ್ಲಿ ಟಾರ್ಬೆಟ್(15) ಅಪರಿಚಿತ ಒಂಟಿ ಮಹಿಳೆಗೆ ಮಧ್ಯರಾತ್ರಿ ಸಹಾಯಕ್ಕೆ ಧಾವಿಸಿದ ಹುಡುಗರು. ಈ ಮೂವರೂ ಡೋನಟ್ ತಿನ್ನಲು ರಾತ್ರಿ ಮನೆಯಿಂದ ಹೊರಟಿದ್ದರು. ಹೈವೇಯಲ್ಲಿದ್ದ ಕಾರಿನಿಂದ ಹೊಗೆ ಬರ್ತಿರೋದು ಗಮನಿಸಿದ್ದಾರೆ.

'ನಾವು ಕಾರಿನ ಬಳಿ ಹೋಗಿ ಪರಿಶೀಲಿಸಿದಾಗ, ಸ್ಟಾರ್ಟ್ ಮಾಡಬಾರದು ಹಾಗೂ ಡ್ರೈವ್ ಮಾಡಬಾರದು ಎಂದು ನಿರ್ಧರಿಸಿದೆವು. ಕಾರ್​ನಲ್ಲಿ ಸೋರಿಕೆ ಉಂಟಾಗಿ, ಎಂಜಿನ್ ಕೂಲೆಂಟ್ ಹಾಗೂ ಎಣ್ಣೆ ಮಿಶ್ರವಾಗಿತ್ತು. ಇದರಿಂದಾಗಿ ಕಾರು ಚಲಾಯಿಸುವುದು ಅಪಾಯಕಾರಿ ಎಂದು ಅರಿತುಕೊಂಡೆವು. ಹಾಗಾಗಿ ನಾವು 8 ಕಿಲೋ ಮೀಟರ್​ವರೆಗೆ ಕಾರನ್ನು ತಳ್ಳಿಕೊಂಡೇ ಸಾಗಿದೆವು. ಒಂದೂವರೆ ಗಂಟೆಯಲ್ಲಿ ನಾವು ನಮ್ಮ ಗುರಿ ತಲುಪಿದೆವು' ಎಂದು ಏರಾನ್ ಮೆಕ್​ಕ್ವಿಲಿಕ್ ಎಂಬ ಬಾಲಕ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ.

ಕಾರ್ ತಳ್ಳುತ್ತಿರುವ ಯುವಕರು..

ಈ ಘಟನೆಗೆ ಸಾಕ್ಷಿಯಾದ ಡಾನ್ ಮಾರಿಸನ್ ಎಂಬ ವ್ಯಕ್ತಿ, '6 ವಾರಗಳ ಹಿಂದೆಯಷ್ಟೇ ಕಾರನ್ನು ಮಹಿಳೆ ಖರೀದಿದ್ದರು. ಅದು ಕೆಟ್ಟು ನಿಂತಾಗ ಮನೆ ತಲುಪಿಸುವಲ್ಲಿ ಸಹಾಯ ಮಾಡಿದ ಹುಡುಗರ ಸಹಾಯ ಮಾಡುವ ಮನೋಭಾವ ಪ್ರಶಂಸನೀಯ' ಎಂದು ಫೇಸ್​ಬುಕ್​ನಲ್ಲಿ ಬರೆದು, ಯುವಕರ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ. 'ನಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಹಲವಾರು ಸಂದೇಶಗಳು ಫೇಸ್‌ಬುಕ್‌​ನಲ್ಲಿ ಬರಲಾರಂಭಿಸಿದವು. ನಮ್ಮ ಕೆಲಸದಿಂದಾಗಿ ಇತರರೂ ಕೂಡಾ ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವಂತಾಗಲಿ' ಎಂದು ಮೆಕ್​ಕ್ವಿಲಿಕ್ ಎಂಬ ಮತ್ತೊಬ್ಬ ಹುಡುಗ ಹೇಳಿಕೊಂಡಿದ್ದಾನೆ.

ಕೆಟ್ಟಿದ್ದ ಕಾರಿನಲ್ಲೇ ನನ್ನ ಕೂರಿಸಿ ಅದನ್ನ 8 ಕಿ.ಮೀ ತಳ್ಳಿಕೊಂಡು ರಾತ್ರಿ ಮನೆಗೆ ಯಾರಾದ್ರೂ ಬಿಡ್ತಾರೆ ಅಂತಾ ನಾನು ಅಂದ್ಕೊಂಡಿರಲಿಲ್ಲ. ಆದರೆ, ಆ ಹುಡುಗರು ಅದನ್ನ ಮಾಡಿದ್ದರು. ಈ ಹುಡುಗರ ಸಹಾಯ ಮರೆಯುವಂತಿಲ್ಲ ಅಂತಾ ಮುಕ್ತಕಂಠದಿಂದಲೇ ನೆರವು ಪಡೆದ ಮಹಿಳೆ ಶ್ಲಾಘಿಸಿದ್ದಾರೆ.

ABOUT THE AUTHOR

...view details