ಕರ್ನಾಟಕ

karnataka

ETV Bharat / international

ಅಮೆರಿಕಾ: ದಕ್ಷಿಣ ಒರೆಗಾನ್​ನಲ್ಲಿ ಭೀಕರ ಕಾಳ್ಗಿಚ್ಚು... ಬೆಂಕಿ ನಂದಿಸಲು ಹರಸಾಹಸ - ಅಮೆರಿಕದಲ್ಲಿ ಭೀಕರ ಕಾಳ್ಗಿಚ್ಚು

ಅಮೆರಿಕಾದ ಒರೆಗಾನ್​ ರಾಜ್ಯದಲ್ಲಿ​ಕಾಳ್ಗಿಚ್ಚು ಹೆಚ್ಚಾಗಿದ್ದು, ನೂರಾರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

Wildfire engulfs southern Oregon town
ಅಮೆರಿಕದ ದಕ್ಷಿಣ ಒರೆಗಾನ್​ನಲ್ಲಿ ಭೀಕರ ಕಾಳ್ಗಿಚ್ಚು

By

Published : Sep 12, 2020, 11:39 AM IST

ಒರೆಗಾನ್ (ಅಮೆರಿಕ): ಪೋರ್ಟ್​ಲ್ಯಾಂಡ್​ನ ಉಪನಗರಗಳು ಸೇರಿದಂತೆ ಒರೆಗಾನ್​ ರಾಜ್ಯದಲ್ಲಿ​ಕಾಳ್ಗಿಚ್ಚು ಹೆಚ್ಚಾಗಿದ್ದು, ನೂರಾರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ರಾಜ್ಯ ತುರ್ತುಸ್ಥಿತಿ ನಿರ್ವಹಣಾ ನಿರ್ದೇಶಕ ಆಂಡ್ರ್ಯೂ ಫೆಲ್ಪ್ಸ್, ಅಧಿಕಾರಿಗಳು "ಸಾಮೂಹಿಕ ಮಾರಣಾಂತಿಕ ಘಟನೆ ವಿರುದ್ಧ ಹೋರಾಡಲು ಸಿದ್ಧತೆ ನಡೆಸುತ್ತಿದ್ದಾರೆ" ಎಂದಿದ್ದಾರೆ. ಅಲ್ಲದೆ ರಾಜ್ಯದಾದ್ಯಂತ 12ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಅಮೆರಿಕದ ದಕ್ಷಿಣ ಒರೆಗಾನ್​ನಲ್ಲಿ ಭೀಕರ ಕಾಳ್ಗಿಚ್ಚು

ಸುಮಾರು 40 ಸಾವಿರಕ್ಕೂ ಹೆಚ್ಚಿನ ಒರೆಗೋನಿಯನ್ನರನ್ನು ಸ್ಥಳಾಂತರಿಸಲಾಗಿದೆ ಮತ್ತು ಸುಮಾರು 5 ಲಕ್ಷ ಜನರು ವಿವಿಧ ಹಂತದ ಸ್ಥಳಾಂತರಿಸುವ ವಲಯಗಳಲ್ಲಿದ್ದಾರೆ ಎಂದು ರಾಜ್ಯಪಾಲರು ಮಾಹಿತಿ ನೀಡಿದ್ದಾರೆ.

ಹವಾಮಾನದಲ್ಲಿನ ಬದಲಾವಣೆಯು ಗಾಳಿ ಬೀಸುವ ದಿಕ್ಕು ಮತ್ತು ತೇವಾಂಶ ಹೆಚ್ಚಾದ ಕಾರಣ ಬೆಂಕಿ ತಡೆಯಲು ಹೆಣಗಾಡುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಹಾಯವಾಗಿದೆ.

ABOUT THE AUTHOR

...view details