ವಾಷಿಂಗ್ಟನ್:ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಭಾರತದಲ್ಲಿ ರ್ಯಾಲಿ-ಪ್ರತಿಭಟನೆಗಳನ್ನು ನಡೆಯುತ್ತಿದ್ದು, ಸಿಎಎ ಪರ ಘೋಷಣೆಗಳು ದೊಡ್ಡಣ್ಣನ ನಾಡಿನಲ್ಲಿ ಕೂಡ ಮೊಳಗಿವೆ.
ದೊಡ್ಡಣ್ಣನ ನಾಡಿನಲ್ಲೂ ಮೊಳಗಿದ ಸಿಎಎ ಪರ ಘೋಷಣೆ: ಪಾಕ್, ಬಾಂಗ್ಲಾ ವಿರುದ್ಧ ಆಕ್ರೋಶ - ವಾಷಿಂಗ್ಟನ್ನಲ್ಲಿ ಸಿಎಎ ಪರ ರ್ಯಾಲಿ
ಅಮೆರಿಕದ ವಾಷಿಂಗ್ಟನ್ ಡಿಸಿ ಹಾಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಅನಿವಾಸಿ ಭಾರತೀಯರು ಹಾಗೂ ಕೆಲವು ಅಮೆರಿಕನ್ ಪ್ರಜೆಗಳು ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಹಾಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಅನಿವಾಸಿ ಭಾರತೀಯರು ಹಾಗೂ ಕೆಲವು ಅಮೆರಿಕನ್ ಪ್ರಜೆಗಳು ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದಾರೆ. ಇದು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಕಾಯ್ದೆಯಾಗಿದ್ದು, ಇದರಲ್ಲಿ ಯಾವುದೇ ಭೇದ- ಭಾವವಿಲ್ಲ ಎಂಬ ಫಲಕಗಳನ್ನು ಹಿಡಿದು, ಘೋಷಣೆ ಕೂಗಿದ್ದಾರೆ.
ಅಲ್ಲದೆ ರ್ಯಾಲಿ ವೇಳೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ವಿರುದ್ಧವೂ ಕೂಡಾ ಘೋಷಣೆಗಳನ್ನು ಕೂಗಲಾಗಿದೆ. ಈ ಎರಡೂ ರಾಷ್ಟ್ರಗಳು ಮಾನವ ಹತ್ಯೆ ನಿಲ್ಲಿಸಬೇಕೆಂದು ತೀವ್ರವಾಗಿ ಆಗ್ರಹಿಸಲಾಯ್ತು. ಇದರ ಜೊತೆಗೆ ಜಿಹಾದಿ ತಂತ್ರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.