ಬಾಗ್ದಾದ್: ಅಮೆರಿಕ ಅಧ್ಯಕ್ಷೀಯ ಸ್ಥಾನದಿಂದ ಕೆಲವೇ ದಿನಗಳಲ್ಲಿ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಕಳೆದ ವರ್ಷ ಜನವರಿ 2020ರಲ್ಲಿ ನಡೆದಿರುವ ಇರಾನ್ ಜನರಲ್ ಹತ್ಯೆ ಹಾಗೂ ಇರಾಕಿ ಸೇನಾ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಇರಾಕ್ ನ್ಯಾಯಾಲಯ ಟ್ರಂಪ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ. ಬಾಗ್ದಾದ್ ಕೋರ್ಟ್ ಈ ಮಾಹಿತಿ ನೀಡಿದ್ದು, ಜನರಲ್ ಖಾಸಿಂ ಸುಲೇಮಾನಿ ಹಾಗೂ ಅಬು ಮಹ್ದಿ ಅಲ್ ಮುಹಂದೀಸ್ ಕಳೆದ ವರ್ಷ ಜನವರಿಯಲ್ಲಿ ಯುಎಸ್ನಿಂದ ನಡೆದ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದರು. ಇದರ ಬಗ್ಗೆ ತನಿಖೆ ನಡೆಸಿರುವ ಬಾಗ್ದಾದ್ ಇನ್ವೆಸ್ಟಿಗೇಟಿವ್ ಕೋರ್ಟ್ ಟ್ರಂಪ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.