ಕರ್ನಾಟಕ

karnataka

ETV Bharat / international

ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್​​ ಆಗ್ತಿದ್ದ ಮೋಸ್ಟ್​ ವಾಂಟೆಡ್​ ಮಾಜಿ ಅಧಿಕಾರಿ ಶೂಟೌಟ್​​​ನಲ್ಲಿ ಮಟಾಷ್​ - ನಾಲ್ವರು ಸಾವು,

ಪೊಲೀಸ್​ ನಡೆಸಿದ್ದ ಗುಂಡಿನ ಕಾಳಗದಲ್ಲಿ ಎರಡು ರಾಜ್ಯಕ್ಕೆ ಬೇಕಾಗಿದ್ದ ವಾಂಟೆಡ್​ ಮಾಜಿ ಪೊಲೀಸ್​ ಅಧಿಕಾರಿ ಮತ್ತು ಆತನ ಇಬ್ಬರು ಮಕ್ಕಳು ಸೇರಿದಂತೆ ಕಾರಿನಲ್ಲಿ ನಾಲ್ವರ ಶವ ಪತ್ತೆಯಾಗಿವೆ.

4 found dead in car, two kids among 4 found dead in car, Wanted ex officer among 4 found dead in car, ನಾಲ್ವರು ಸಾವು, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು, ಮಾಜಿ ಪೊಲೀಸ್​ ಅಧಿಕಾರಿ ಸೇರಿ ನಾಲ್ವರು ಸಾವು, ಸ್ಮತ್ಸ್​ಬರ್ಗ್
ಸಾಂದಭೀಕ ಚಿತ್ರ

By

Published : Nov 20, 2021, 11:02 AM IST

ಸ್ಮಿತ್ಸ್‌ಬರ್ಗ್ (ಅಮೆರಿಕ): ಹಲವು ಪ್ರಕರಣದಲ್ಲಿ ಬೇಕಾಗಿದ್ದ ಮಾಜಿ ಪೊಲೀಸ್​ ಅಧಿಕಾರಿ ಮತ್ತು ಆತನ ಇಬ್ಬರು ಹೆಣ್ಮಕ್ಕಳು ಹಾಗೂ ಇತ್ತಿಚೇಗೆ ಅಮಾನತುಗೊಂಡಿದ್ದ ಮಹಿಳಾ ಪೊಲೀಸ್​ ಅಧಿಕಾರಿ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಕಾರು ಬೆನ್ನಟ್ಟಿದ ಪೊಲೀಸರು ಮೇರಿಲ್ಯಾಂಡ್-ಪೆನ್ಸಿಲ್ವೇನಿಯಾ ಲೈನ್ ಬಳಿ ಚೇಸಿಂಗ್​ ವೇಳೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮಾಜಿ ಪೊಲೀಸ್​ ಅಧಿಕಾರಿ ಮತ್ತು ಆತನ ಇಬ್ಬರು ಹೆಣ್ಮಕ್ಕಳು ಹಾಗೂ ಅಮಾನತುಗೊಂಡ ಮಹಿಳಾ ಪೊಲೀಸ್​ ಅಧಿಕಾರಿ ಸಾವನ್ನಪ್ಪಿದ್ದಾರೆ.

ನಡೆದ ಗುಂಡಿನ ದಾಳಿಯಲ್ಲಿ ಎರಡೂ ರಾಜ್ಯಗಳಲ್ಲಿ ಅಪರಾಧಗಳಿಗೆ ಬೇಕಾಗಿರುವ ಮಾಜಿ ಬಾಲ್ಟಿಮೋರ್ ಕೌಂಟಿ ಪೊಲೀಸ್ ಅಧಿಕಾರಿ ರಾಬರ್ಟ್ ವಿಕೋಸಾ (41) ಪರಾರಿಯಾಗಿದ್ದರು. ಗುರುವಾರ ಫೋರ್ಡ್ ಎಡ್ಜ್ ಕಾರಿನ ಹಿಂದಿನ ಸೀಟಿನಲ್ಲಿ 6 ಮತ್ತು 7 ವರ್ಷದ ತನ್ನಿಬ್ಬರು ಹೆಣ್ಣುಮಕ್ಕಳೊಂದಿಗೆ ರಾಬರ್ಟ್​ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲ ಬಾಲಕಿಗೆ ಗಾಯ

ಚಾಲಕನ ಸೀಟಿನಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಅಮಾನತುಗೊಂಡ ಕೌಂಟಿ ಪೊಲೀಸ್ ಅಧಿಕಾರಿ ತಿಯಾ ಬೈನಮ್ (35) ಎಂದು ಗುರುತಿಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ತೀವ್ರ ಗಾಯಗಳಿಂದ ಬಳಲುತ್ತಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗಾಗಲೇ ಆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಉಳಿದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡ ಹೆಂಡತಿ ನಡುವಣ ಜಗಳ.. ಇಷ್ಟಕ್ಕೆಲ್ಲ ಕಾರಣ

ರಾಬರ್ಟ್​ ಮತ್ತು ಆತನ ಪತ್ನಿ ಕೌಟುಂಬಿಕ ಕಲಹದಿಂದ ದೂರವಾಗಿದ್ದರು. ಶುಕ್ರವಾರದಂದು ರಾಬರ್ಟ್​ ವಿಕೋಸಾ ಅವರ ಪತ್ನಿಯ ಜನ್ಮದಿನ. ಹೀಗಾಗಿ ನಿನ್ನ ಜನ್ಮದಿನವನ್ನು ಮಕ್ಕಳೊಂದಿಗೆ ಆಚರಿಸೋಣಾ ಬಾ ಎಂದು ಪತ್ನಿಯನ್ನು ರಾಬರ್ಟ್​ ಮನೆಗೆ ಕರೆದಿದ್ದಾನೆ. ಅದರಂತೆ ಆಕೆ ರಾಬರ್ಟ್​ ಮನೆಗೆ ತೆರಳಿ ಜನ್ಮದಿನ ಆಚರಿಸಿದ್ದಾರೆ.

ಬಳಿಕ ಮಕ್ಕಳು ಮಲಗಲು ತೆರಳಿದ್ದರು. ಮಹಿಳೆಯೂ ಸಹ ತನ್ನ ಮನೆಗೆ ಹೋಗಲು ಸಿದ್ಧವಿದ್ದಳು. ಅಷ್ಟರಲ್ಲೇ ರಾಬರ್ಟ್​ ಮತ್ತು ಆತನ ಪತ್ನಿ ಮಧ್ಯೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ರಾಬರ್ಟ್​ ಗನ್​ ಪಾಯಿಂಟ್​ನಲ್ಲಿ ತನ್ನ ಪತ್ನಿಯನ್ನು ಮನೆಯ ಮಾಳಿಗೆಯ ಕೊಠಡಿವೊಂದಕ್ಕ ಕರೆದೊಯ್ದು ಹಗ್ಗದಿಂದ ಕಟ್ಟಿ ಹಾಕಿದ್ದಾನೆ.

ತನ್ನ ಪತಿಯಿಂದ ತಪ್ಪಿಸಿಕೊಂಡ ಮಹಿಳೆ ನೇರ 911ಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಸರ್ಚ್​ ವಾರೆಂಟ್​ ತೆಗೆದುಕೊಂಡ ಪೊಲೀಸರು ರಾಬರ್ಟ್​ ವಿಕೋಸಾ ಮನೆಗೆ ತೆರಳಿದ್ದಾರೆ. ಆದರೆ ರಾಬರ್ಟ್​ ಮನೆಯಲ್ಲಿ ಯಾರೂ ಇಲ್ಲದ ಕಾರಣ ಗ್ಲಾಸ್​ನ ಬಾಗಿಲು ಮುರಿದು ಪೊಲೀಸರು ಒಳ ನಡೆದಿದ್ದಾರೆ. ಸಂಪೂರ್ಣವನ್ನು ಮನೆಯನ್ನು ಪೊಲೀಸರು ಪರಿಶಿಲನೆ ನಡೆಸಿದ್ದಾರೆ. ಆದ್ರೆ ರಾಬರ್ಟನ ಸುಳಿವು ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ.

ಪೊಲೀಸರು ಚೇಜ್​​ ಮಾಡಿದ್ದೇಕೆ?

ರಾಬರ್ಟ್​ ತನ್ನಿಬ್ಬರ ಹೆಣ್ಮಕ್ಕಳನ್ನು ಕರೆದುಕೊಂಡು ಹೋಗಿರುವ ಅನುಮಾನದ ಮೇಲೆ ಕೌಂಟಿ ಪೊಲೀಸ್ ಅಧಿಕಾರಿ ತಿಯಾ ಬೈನಮ್ ಮನೆಗೆ ತೆರಳಿದ್ದಾರೆ. ಫೋರ್ಡ್ ಎಡ್ಜ್ ಕಾರನ್ನು ಅಪಹರಿಸಿ ಬೈನಮ್​, ರಾಬರ್ಟ್​ ಮತ್ತು ಆತನ ಇಬ್ಬರು ಮಕ್ಕಳು ಪೆನ್ಸಿಲ್ವೇನಿಯಾ ಸ್ಟೇಟ್ ಕಡೆ ಪ್ರಯಾಣ ಬೆಳೆಸಿದ್ದರು.

ಈ ವೇಳೆ ಅಲ್ಲಿನ ಪೊಲೀಸರು ಮೇರಿಲ್ಯಾಂಡ್ ಸ್ಟೇಟ್ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಚೇಸಿಂಗ್​ ಮಾಡಿದ್ದ ಪೊಲೀಸರು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಸಾವಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details