ನ್ಯೂಯಾರ್ಕ್(ಅಮೆರಿಕ) :ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್, ಭಾರತೀಯ ಅಮೆರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಮುಂದಿನ ಸರ್ಜನ್ ಜನರಲ್ ಹುದ್ದೆಗೆ ನೇಮಕ ಮಾಡಿದ್ದಾರೆ.
ಅಮೆರಿಕ ಮುಂದಿನ ಸರ್ಜನ್ ಜನರಲ್ ಹುದ್ದೆಗೆ ಡಾ.ವಿವೇಕ್ ಮೂರ್ತಿ ನೇಮಕ - ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ವಿವೇಕ್ ಮೂರ್ತಿ ನೇಮಕ
ಭಾರತೀಯ ಅಮೆರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಮುಂದಿನ ಸರ್ಜನ್ ಜನರಲ್ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಡಾ.ವಿವೇಕ್ ಮೂರ್ತಿ
ವಿವೇಕ್ ಮೂರ್ತಿ ಪ್ರಸ್ತುತ ಜೋ ಬೈಡನ್ ಅವರ ಕೋವಿಡ್ 19 ಸಲಹಾ ಮಂಡಳಿಯ ಸಹ ಅಧ್ಯಕ್ಷರಾಗಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ಈ ಹುದ್ದೆಗೆ ನಿಯೋಜನೆಗೊಂಡಿದ್ದ ವಿವೇಕ್ ಮೂರ್ತಿ ಅವರು, ಟ್ರಂಪ್ ಆಡಳಿತದ ವೇಳೆ ನಿರ್ಗಮಿಸಿದ್ದರು.
ಮೂರ್ತಿಯವರು ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವಾಗ, ಎಬೋಲಾ ಮತ್ತು ಜಿಕಾ ವೈರಸ್ ಹರಡುವಿಕೆ ವಿರುದ್ಧ ಹೋರಾಡಿದ್ದರು. ಜೊತೆಗೆ ಗುಂಡೇಟಿಗೆ ಒಳಗಾಗಿದ್ದವರಿಗೆ ಚಿಕಿತ್ಸೆ ನೀಡಿ, ಅಲ್ಲಿ ನಡೆಯುತ್ತಿದ್ದ ಹಿಂಸಾಚಾರಗಳ ಬಗ್ಗೆ ಧ್ವನಿ ಎತ್ತಿದ್ದರು.