ರೋಮ್( ಇಟಲಿ): ವಿಶ್ವಾದ್ಯಂತ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ 1 ಲಕ್ಷದ ಹತ್ತಿರಕ್ಕೆ ಬಂದು ನಿಂತಿದೆ. ವಿಶ್ವದ ಬಲಿಷ್ಟ ರಾಷ್ಟ್ರಗಳಿಂದು ವೈರಸ್ ವಿರುದ್ಧ ಹೋರಾಡಲು ನಿಂತಿವೆ. ಈ ನಡುವೆ ವಿಶ್ವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವನಿಟ್ಟಿನಲ್ಲಿ ಲಾಕ್ಡೌನ್ ನಿಯಮ ಹೇರಲಾಗಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಬಾರಿಯ ಈಸ್ಟರ್ ರಜೆಯನ್ನು ಮನೆಯಲ್ಲಿಯೇ ಕಳೆದಿದ್ದಾರೆ.
ಮಧ್ಯಪ್ರಾಚ್ಯ, ಯೂರೋಪ್ ಹಾಗೂ ಏಷ್ಯಾದದಲ್ಲಿ ಗುಡ್ ಫ್ರೈಡೇ ಅಥವಾ ಈಸ್ಟರ್ನ ವೇಳೆ ಜನರಿಂದ ತುಂಬಿರುತ್ತಿದ್ದ ನಗರಗಳು ಖಾಲಿಯಾಗಿವೆ.